ಕರ್ನಾಟಕದಲ್ಲಿ ಒಮಿಕ್ರೋನ್ ಉಪತಳಿ ಪತ್ತೆ!

ಗುರುವಾರ, 23 ಜೂನ್ 2022 (11:10 IST)
ಬೆಂಗಳೂರು : ರಾಜ್ಯದಲ್ಲಿ ಕೊರೋನಾ ರೂಪಾಂತರಿ ಒಮಿಕ್ರೋನ್ನ ಉಪತಳಿಗಳಾದ ಬಿಎ3, ಬಿಎ4 ಹಾಗೂ ಬಿಎ 5 ಪತ್ತೆಯಾಗಿದ್ದು,
 
ಕಳೆದ ಒಂದು ತಿಂಗಳಿಂದ ಕೊರೋನಾ ಹೊಸ ಪ್ರಕರಣಗಳು ಹೆಚ್ಚಳಕ್ಕೆ ಈ ಉಪತಳಿಗಳು ಕೂಡ ಕಾರಣ ಎಂದು ತಜ್ಞರು ತಿಳಿಸಿದ್ದಾರೆ.

ಸದ್ಯ ನಾಲ್ಕನೇ ಅಲೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಹೊಸ ರೂಪಾಂತರಿಗಳು ಮತ್ತು ಅದರ ಉಪತಳಿಗಳನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ವಂಶವಾಹಿ (ಜಿನೋಮಿಕ್ ಸೀಕ್ವೆನ್ಸ್) ಪರೀಕ್ಷೆಗಳನ್ನು ನಿರಂತರವಾಗಿ ನಡೆಸುತ್ತಿದೆ.

ಮೇ ಮತ್ತು ಜೂನ್ನಲ್ಲಿ ನಡೆದ ವಂಶವಾಹಿ ಪರೀಕ್ಷೆಗಳಲ್ಲಿ ಶೇ.98 ರಷ್ಟುಒಮಿಕ್ರೋನ್ನ ಬಿಎ1.1.529, ಬಿಎ1, ಬಿಎ2 ಪತ್ತೆಯಾಗಿದ್ದು, ಶೇ.2ರಷ್ಟುಒಮಿಕ್ರೋನ್ನ ಹೊಸ ಉಪತಳಿಗಳಾದ ಬಿಎ3, ಬಿಎ4, ಬಿಎ 5 ಪತ್ತೆಯಾಗಿವೆ. ಈ ಮೂಲಕ ನಾಲ್ಕನೇ ಅಲೆಗೆ ಕಾರಣವಾಗಬಹುದು ಎಂದು ಅಂದಾಜಿಸಿರುವ ಬಿಎ 3-5 ಉಪತಳಿಗಳು ರಾಜ್ಯದಲ್ಲಿಕ್ಕೂ ಕಾಲಿಟ್ಟಂತಾಗಿದೆ.

ಮೇ ಮತ್ತು ಜೂನ್ನಲ್ಲಿ ನಡೆಸಿದ ಪರೀಕ್ಷೆಗಳಲ್ಲಿ ಹೊಸ ಉಪತಳಿಗಳು ಒಂದಿಷ್ಟುಪ್ರಮಾಣದಲ್ಲಿರುವುದು ದೃಢಪಟ್ಟಿದೆ. ಇವುಗಳಿಂದಲೇ ಕಳೆದ ಒಂದು ತಿಂಗಳಿಂದ ಹೊಸ ಪ್ರಕರಣ ಹೆಚ್ಚಳವಾಗಿರುವುದು ಎಂದು ಆರೋಗ್ಯ ಇಲಾಖೆ ಸಾಂಕ್ರಾಮಿಕ ರೋಗಗಳ ವಿಭಾಗದ ವೈದ್ಯಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ