ಮಹಾಘಟಬಂಧನ್ ಬೇಕು, ಆದರೆ ರಾಹುಲ್ ಬೇಡವೆಂದ ವಿಪಕ್ಷಗಳು!

ಸೋಮವಾರ, 28 ಮೇ 2018 (09:44 IST)
ನವದೆಹಲಿ: 2019 ರ ಲೋಕಸಭೆ ಚುನಾವಣೆಗೆ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ವಿರುದ್ಧ ಹೋರಾಡಲು ಮಹಾಘಟಬಂಧನಕ್ಕೆ ತೊಡಗಿದ್ದ ವಿಪಕ್ಷಗಳಲ್ಲಿ ಇದೀಗ ಬಿರುಕು ಮೂಡಿದೆ.

ಕಾಂಗ್ರೆಸ್ ಪ್ರಧಾನ ಪಕ್ಷವಾಗಿದ್ದುಕೊಂಡು ಉಳಿದ ಮಿತ್ರ ಪಕ್ಷಗಳೆಲ್ಲಾ ಒಗ್ಗಟ್ಟಾಗಿ ಲೋಕಸಭೆ ಚುನಾವಣೆ ಎದುರಿಸಲು ತಂತ್ರ ರೂಪಿಸಿದ್ದವು. ಆದರೆ ಸ್ಥಾನ ಹಂಚಿಕೆ, ಪ್ರಧಾನಿ ಅಭ್ಯರ್ಥಿ ವಿಚಾರದಲ್ಲಿ ವಿಪಕ್ಷಗಳಲ್ಲಿ ಒಡಕು ಮೂಡಿವೆ.

ಬಿಎಸ್ ಪಿ ನಾಯಕಿ ಮಾಯಾವತಿ ತಮ್ಮ ಪಕ್ಷಕ್ಕೆ ಹೆಚ್ಚಿನ ಸ್ಥಾನ ನೀಡದಿದ್ದರೆ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಸೂಚನೆ ನೀಡಿದ್ದಾರೆ. ಜತೆಗೆ ತಾವೇ ಪ್ರಧಾನಿ ಅಭ್ಯರ್ಥಿಯಾಗಬೇಕೆಂಬ ಆಸೆಯೂ ಅವರಿಗಿದೆ.

ಅತ್ತ ಇತ್ತೀಚೆಗಷ್ಟೇ ಬಿಜೆಪಿ ಮೈತ್ರಿಯಿಂದ ಹೊರಬಂದಿರುವ ಸಿಎಂ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಪಕ್ಷಕ್ಕೆ ಎಲ್ಲಾ ಓಕೆ ಆದರೆ ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿಯಾಗುವುದು ಇಷ್ಟವಿಲ್ಲವಂತೆ. ಹೀಗಾಗಿ ಆರಂಭದಲ್ಲಿಯೇ ಮಹಾಘಟಬಂಧನದಲ್ಲಿ ಬಿರುಕು ಮೂಡಿದ ಸುಳಿವು ಸಿಕ್ಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ