ಪ್ರಧಾನಿ ಮೋದಿ ವಿರುದ್ಧ ಪೇಜಾವರ ಶ್ರೀಗಳು ಅಸಮಾಧನ
ವಿದೇಶದಿಂದ ಕಪ್ಪು ಹಣ ತರುತ್ತೇನೆ ಎಂದಿದ್ದ ಪ್ರಧಾನಿ ಮೋದಿ ಕಪ್ಪು ಹಣ ತರಲಿಲ್ಲ. ಇದು ಮುಂಬರುವ ಚುನಾವಣೆಯಲ್ಲಿ ಪರಿಣಾಮ ಬೀರಬಹುದು ಎಂದು ಪೇಜಾವರ ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗಂಗಾ ನದಿ ನೀರು ಶುದ್ಧೀಕರಣ ಮಾಡುತ್ತೇನೆಂದಿದ್ದ ಮೋದಿ ಆ ಕೆಲಸ ಮಾಡಲಿಲ್ಲ. ಇನ್ನು, ರಾಮಜನ್ಮಭೂಮಿಯಲ್ಲಿ ರಾಮ ಮಂದಿರ ನಿರ್ಮಾಣ ಅಷ್ಟು ಸುಲಭವಲ್ಲ. ಆದರೆ ಉಳಿದ ಕೆಲಸಗಳನ್ನೂ ಮಾಡಲಿಲ್ಲ. ಇನ್ನು ಬಾಕಿ ಇರುವ ಒಂದು ವರ್ಷದಲ್ಲಿ ಆದಷ್ಟು ಒಳ್ಳೆ ಕೆಲಸ ಮಾಡದಿದ್ದರೆ ಚುನಾವಣೆಯಲ್ಲಿ ಪರಿಣಾಮ ಬೀರಬಹುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.