ಪ್ರಧಾನಿ ಮೋದಿಗೆ ಒಬ್ಬ ಹೈಕಮಾಂಡ್ ಇದ್ದಾರೆ! ಅವರು ಯಾರು ಗೊತ್ತಾ?
ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ವಾರಣಾಸಿಯಲ್ಲಿ ಕಾರ್ಯಕ್ರಮದಲ್ಲಿ ಮಾತನಾಡುವಾಗ ಪ್ರಧಾನಿ ಮೋದಿ ತಮ್ಮ ಹೈಕಮಾಂಡ್ ಯಾರು ಎಂದು ಬಹಿರಂಗಪಡಿಸಿದ್ದಾರೆ.
‘ನೀವು ನನಗೆ ಪ್ರಧಾನ ಮಂತ್ರಿ ಎಂಬ ದೊಡ್ಡ ಜವಾಬ್ಧಾರಿ ನೀಡಿದ್ದೀರಿ. ನಾನೂ ನನ್ನ ಕರ್ತವ್ಯದ ಮೂಲಕ ಅದನ್ನು ನಿಭಾಯಿಸಬೇಕಿದೆ. ನೀವು ನನಗೆ ಬಾಸ್, ಹೈಕಮಾಂಡ್’ ಎಂದು ನೆರೆದಿದ್ದ ಜನರನ್ನು ಉದ್ದೇಶಿಸಿ ಮೋದಿ ಹೇಳಿದ್ದಾರೆ. ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಪ್ರಧಾನಿ ಮೋದಿ ಎರಡು ದಿನಗಳ ಕಾಲ ಸ್ವಕ್ಷೇತ್ರ ವಾರಣಾಸಿಯಲ್ಲಿ ಪ್ರವಾಸ ಕೈಗೊಂಡಿದ್ದರು.