ಕೆಎಸ್ ಈಶ್ವರಪ್ಪ ಮೇಲೆ ಬಿಜೆಪಿ ಉಸ್ತುವಾರಿ ಪ್ರಕಾಶ್ ಜಾವೇಡ್ಕರ್ ಗೆ ಕೆಂಡದಂಥಾ ಕೋಪ ಬಂದಿದ್ದೇಕೆ?!
ಗುರುವಾರ, 17 ಮೇ 2018 (08:37 IST)
ಬೆಂಗಳೂರು: ಹಾಗೂ ಹೀಗೂ ಕಷ್ಟಪಟ್ಟು ಕೆಪಿಜೆಪಿ ಪಕ್ಷದ ಶಾಸಕ ಶಂಕರ್ ಬೆಂಬಲ ಗಳಿಸಿದ್ದನ್ನು ಅಷ್ಟೇ ವೇಗವಾಗಿ ಕೈ ತಪ್ಪಲು ಕಾರಣರಾದ ಕೆಎಸ್ ಈಶ್ವರಪ್ಪ ಮೇಲೆ ಬಿಜೆಪಿ ರಾಜ್ಯ ಉಸ್ತುವಾರಿ ಪ್ರಕಾಶ್ ಜಾವೇಡ್ಕರ್ ಸಿಟ್ಟಿಗೆದ್ದಿದ್ದಾರೆ.
ನಿನ್ನೆ ಬೆಳಿಗ್ಗೆಯವರೆಗೂ ಶಂಕರ್ ಬಿಜೆಪಿ ಪರ ಇದ್ದರು. ಆದರೆ ಸಂಜೆ ಕಾಂಗ್ರೆಸ್ ಕಡೆಗೆ ವಾಲಿದ್ದರು. ಸದ್ಯಕ್ಕೆ ಬಿಜೆಪಿಗೆ ಒಬ್ಬೊಬ್ಬ ಶಾಸಕರ ಬೆಂಬಲವೂ ಮುಖ್ಯ. ಹಾಗಿರುವಾಗ ಅನಾಯಾಸವಾಗಿ ಸಿಕ್ಕ ಶಾಸಕನನ್ನು ಉಳಿಸಿಕೊಳ್ಳದ ಈಶ್ವರಪ್ಪ ಮೇಲೆ ಜಾವೇಡ್ಕರ್ ಸಿಟ್ಟಿಗೆದ್ದಿದ್ದಾರೆ.
‘ಒಬ್ಬ ಹಿರಿಯ ನಾಯಕನಾಗಿ ನಿಮಗೆ ಶಾಸಕನನ್ನು ಉಳಿಸಿಕೊಳ್ಳಲಾಗಲಿಲ್ಲವೇ? ನಿಮ್ಮ ಮಗ ಕಾಂತೇಶ್ ನನ್ನು ಕಳುಹಿಸಿ ಏಕೆ ಒಪ್ಪಿಸಿದಿರಿ? ನಿಮ್ಮ ಜತೆಗೇ ಇದ್ದ ಶಾಸಕ ಕಾಂಗ್ರೆಸ್ ಜತೆ ಸಂಪರ್ಕ ಬೆಳೆಸಿದ್ದು ಹೇಗೆ? ಇದನ್ನೆಲ್ಲಾ ಅಮಿತ್ ಶಾ ಗಮನಕ್ಕೆ ತರುತ್ತೇನೆ. ನೀವೇ ಉತ್ತರ ಕೊಡಿ’ ಎಂದು ಈಶ್ವರಪ್ಪಗೆ ಜಾವೇಡ್ಕರ್ ತಾಕೀತು ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.