ಬಿಟ್ಟು ಬಿಡದ ಮಳೆ! 6 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

ಶುಕ್ರವಾರ, 12 ನವೆಂಬರ್ 2021 (08:41 IST)
ಕಳೆದ ಒಂದು ವಾರದಿಂದ  ಬೆಂಗಳೂರು ಮಲೆನಾಡು ಆಗಿ ಬದಲಾಗಿದೆ. ಇಂದು ಸಹ ಬೆಂಗಳೂರಿನಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ  ಹಿನ್ನೆಲೆ ತಮಿಳುನಾಡು ಸಹ ತತ್ತರಿಸಿದ್ದು, ಇದರ ಪರಿಣಾಮ ಬೆಂಗಳೂರಿಗೂ ಸಹ ತಟ್ಟಿದೆ. ಇನ್ನು ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಮಳೆಯಾಗಲಿದ್ದು, ಆರು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಸಲಾಗಿದೆ. ಆಗ್ನೇಯ ಬಂಗಾಳಕೊಲ್ಲಿಯಲ್ಲಿನ ಮೇಲ್ಮೈ ಸುಳಿಗಾಳಿ ಪ್ರಬಲವಾಗಿ ರೂಪಗೊಂಡ ಪರಿಣಾಮ ಮಳೆಯಾಗುತ್ತಿದೆ. ನವೆಂಬರ್ 11 ರಿಂದಲೇ ಬೆಂಗಳೂರು ಸೇರಿದಂತೆ ಹಲವೆಡೆ ಮಳೆಯಾಗುತ್ತಿದೆ. ನಾಳೆಯೂ ಬೆಂಗಳೂರು ಗ್ರಾಮಾಂತರ, ಮೈಸೂರು, ಚಾಮರಾಜನಗರ,ರಾಮನಗರ, ಕೋಲಾರ, ಕೊಡಗು, ಚಿಕ್ಕಬಳ್ಳಾಪುರ ಮತ್ತು ಹಾಸನದಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಬೆಂಗಳೂರಿನ ಹಲವೆಡೆ ಭಾರೀ ಮಳೆ ಆಗುವ ಸಾಧ್ಯತೆಗಳಿಗೆ ಎಂದ ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ವಿಮಾನ ನಿಲ್ದಾಣದಲ್ಲಿ 3.8 mm, ಹೆಚ್ಎ ಎಲ್ ನಲ್ಲಿ 3.5 mm ಮಳೆಯಾಗಿದೆ. ವಾಯುಭಾರ ವೈಪರೀತ್ಯ ಇಂದು ಸಂಜೆ ಚೆನ್ನೈ ಹಾಗೂ ಆಂಧ್ರದ ಮೂಲಕ ಸಂಚರಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ