
ಯುರೋಪ್ನಲ್ಲಿ ಕೊರೊನಾ ಪ್ರಕರಣಗಳು ತೀವ್ರಗತಿಯಲ್ಲಿ ಏರುತ್ತಿರುವುದು ತೀವ್ರ ಆತಂಕ ಸೃಷ್ಟಿಸಿದೆ ಅಂತ ವಿಶ್ವ ಆರೋಗ್ಯ ಸಂಸ್ಥೆಯ ಯುರೋಪ್ ಮುಖ್ಯಸ್ಥ ಹೇಳಿದ್ದಾರೆ.ಈ ಬಗ್ಗೆ ಮಾತನಾಡಿರುವ ಹ್ಯಾನ್ಸ್ ಕ್ಲೂ, ಯುರೋಪ್ನ 53 ದೇಶಗಳಲ್ಲಿ ಪ್ರಸ್ತುತ ಕೋವಿಡ್ನ ಪ್ರಸರಣದ ವೇಗವು ತೀವ್ರ ಆತಂಕಕಾರಿಯಾಗಿದೆ ಅಂತ ಹೇಳಿದರು. ದಾಖಲೆ ಮಟ್ಟದಲ್ಲಿ ಕೊರೊನಾ ಪ್ರಕರಣಗಳು ಏರುತ್ತಿವೆ. ಕೊರೊನಾ ವೈರಸ್ನ ರೂಪಾಂತರ ಮಾದರಿಯಾದ ಡೆಲ್ಟಾದಿಂದ ಪ್ರಕರಣಗಳು ತೀವ್ರಗತಿಯಲ್ಲಿ ಹೆಚ್ಚಾಗುತ್ತಿದೆ. ಫೆಬ್ರುವರಿ ವೇಳೆಗೆ ಯುರೋಪ್ನಲ್ಲಿ ಐದು ಲಕ್ಷ ಮಂದಿ ಕೊರೊನಾಗೆ ಬಲಿಯಾಗಬಹುದು ಅಂತಾನೂ ಕ್ಲೂ ಅಂದಾಜಿಸಿದ್ದಾರೆ.

