ಶಾಲಾ-ಕಾಲೇಜುಗಳಿಗೆ ಮಾರ್ಗಸೂಚಿ ಬಿಡುಗಡೆ

ಬುಧವಾರ, 29 ಜೂನ್ 2022 (12:46 IST)
ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಕೇಸ್ಗಳ ಹೆಚ್ಚಳ ಬೆನ್ನಲ್ಲೇ ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿ ರಿಲೀಸ್ ಮಾಡಿದೆ.
 
ಅಪಾರ್ಟ್ಮೆಂಟ್, ಶಾಲಾ-ಕಾಲೇಜುಗಳಲ್ಲಿ ಕೊರೊನಾ ಕೇಸ್ಗಳು ದಾಖಲಾದ್ರೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಸುತ್ತೋಲೆ ಹೊರಡಿಸಿದೆ.

ಮಾರ್ಗಸೂಚಿ

3- ರಿಂದ 5 ಪ್ರಕರಣ ದಾಖಲಾದಲ್ಲಿ ಸಣ್ಣ ಕ್ಲಸ್ಟರ್ ಎಂದು ಪರಿಗಣಿಸಬೇಕು. 15ಕ್ಕಿಂತ ಹೆಚ್ಚು ಪ್ರಕರಣ ದಾಖಲಾದಲ್ಲಿ ಎಲ್ಲರಿಗೂ ರ್ಯಾಪಿಡ್ ಟೆಸ್ಟ್ ಕಡ್ಡಾಯವಾಗಿ ಮಾಡಬೇಕು.

ಸೋಂಕಿನ ಲಕ್ಷಣ ಇಲ್ಲದಿದ್ದಕ್ಕೆ ಕೊರೊನಾ ಟೆಸ್ಟ್ ಅಗತ್ಯವಿಲ್ಲ. ಮನೆ ಕೆಲಸದವರು 60 ವರ್ಷಕ್ಕಿಂತ ಕೆಳಗಿನವರಾಗಿರಬೇಕು. ಮನೆಕೆಲಸಗಾರರು, ಸಿಬ್ಬಂದಿಗೆ ಓ 95 ಮಾಸ್ಕ್ ಕಡ್ಡಾಯ. ಕೊರೊನಾ ಪತ್ತೆಯಾದಲ್ಲಿ ಪಾರ್ಕ್, ಸ್ವಿಮ್ಮಿಂಗ್ಪೂಲ್, ಕ್ಲಬ್ಹೌಸ್ಗಳು ಕ್ಲೋಸ್ ಮಾಡಬೇಕು.

ಸೋಂಕು ಕಂಡು ಬಂದ ಫ್ಲೋರ್, ಅಪಾರ್ಟ್ಮೆಂಟ್ ಸೀಲ್ಡೌನ್ ಮಾಡಬೇಕು. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸೋಂಕು ಬಂದ್ರೆ ಕಡ್ಡಾಯ ರಜೆ ಹಾಕಬೇಕು. ಈ ಎಲ್ಲಾ ಮಾರ್ಗಸೂಚಿಗಳು ಖಾಸಗಿ ಕಚೇರಿಗಳಿಗೂ ಅನ್ವಯವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ