ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ದಿನಾ ಒಂದಿಲ್ಲೊಂದು ರಸ್ತೆ ಅಪಘಾತ ಆಗುತ್ತಿರುತ್ತದೆ.
ಕುಟುಂಬಸ್ಥರು ತಮ್ಮವರನ್ನು ಕಳೆದುಕೊಂಡು ಹೇಳಲಾಗದ ನೋವು ಅನುಭವಿಸುತ್ತಿರುತ್ತಾರೆ. ಇದಕ್ಕೆಲ್ಲ ಕಾರಣ ಗುಂಡಿ ಬಿದ್ದ ರಸ್ತೆಗಳು, ಸವಾರರ ನಿರ್ಲಕ್ಷ್ಯ ಒಂದ್ಕಡೆಯಾದರೆ ಮತ್ತೊಂದು ಕಾರಣ ಬೆಂಗಳೂರಿಗೆ ಬರುವ ಭಾರೀ ಗಾತ್ರದ ವಾಹನಗಳು.
ಹೌದು. ಹೆವಿ ವೆಹಿಕಲ್ಗಳು ಸಂಚಾರಿ ನಿಯಮ ಪಾಲಿಸದೇ ತಾವು ನಡೆದಿದ್ದೇ ಹಾದಿ ಎಂಬಂತೆ ನುಗ್ಗುತ್ತಾರೆ. ಇದರಿಂದ ಹಲವು ಅಮಾಯಕರು ಜೀವ ಕಳೆದುಕೊಂಡಿದ್ದಾರೆ.
ಅಂದು ಆ ಸಮಯಕ್ಕೆ ಹೆವಿ ವೆಹಿಕಲ್ ಬರಬಾರ್ದಿತ್ತು. ಮಗು ಆತಂಕದಲ್ಲಿ ಪ್ರಾಣ ಬಿಡ್ತು. ಇನ್ನು ವೆಹಿಕಲ್ ಹರಿದು ಸತ್ತವರ ಕಥೆ ಹೇಗಿರಬೇಕು. ಹೀಗಂತ ಸಾನ್ವಿ ತಾಯಿ ಅಮೃತ ತಮ್ಮ ಮದ್ದು ಮಗಳಿಗೆ ಆದ ಪರಿಸ್ಥಿತಿ ಯಾರಿಗೂ ಬೇಡ ಅಂತಾರೆ.
ಇಷ್ಟೆಲ್ಲ ಆದರೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬ್ಯುಸಿನೆಸ್, ವ್ಯವಹಾರನೇ ಮುಖ್ಯ. ಶಾಲೆ – ಕಚೇರಿಗೆ ಹೋಗುವ ಸಂದರ್ಭದಲ್ಲಿ ಸರಕು ಸಾಗಣೆಯ ಭಾರೀ ವಾಹನಗಳ ಓಡಾಟ ಅಪಾಯಕಾರಿ. ಹೀಗಾಗಿ ನಿಗದಿತ ಸಮಯದಲ್ಲಿ ಮಾತ್ರ ವಾಹನಗಳ ಓಡಾಡಬೇಕು ಎಂಬ ಆದೇಶ ಇದೆ. ಆದರೆ ಇದನ್ನ ಮೀರಿ ರಸ್ತೆಗೆ ಬರುವ ವಾಹನಗಳು ಅಪಾಯ ತಂದೊಡ್ಡುತ್ತಿದೆ.
ಭಾರೀ ವಾಹನ ಸಂಚಾರ ರೂಲ್ಸ್
* ಬೆ.7ರಿಂದ 11 ಗಂಟೆವರೆಗೆ ಸಂಚಾರಕ್ಕೆ ಅವಕಾಶವಿಲ್ಲ
* ಬೆ.11ರಿಂದ ಸಂಜೆ 4 ಗಂಟೆವರೆಗೆ ಓಡಾಟಕ್ಕೆ ಅವಕಾಶ
* ಸಂಜೆ 4 ರಿಂದ ರಾತ್ರಿ 8ರವರೆಗೆ ಸಂಚಾರಕ್ಕೆ ಬ್ರೇಕ್
* ರಾತ್ರಿ 8 ರಿಂದ ಬೆ.7ಗಂಟೆವರೆಗೆ ಓಡಾಟಕ್ಕೆ ಅವಕಾಶ
ಆದರೆ ಈ ರೂಲ್ಸ್ ಗಳೆಲ್ಲಾ ಬರೀ ಹೇಳೋಕಷ್ಟೇ ಸೀಮಿತವಾಗಿದೆ. ಯಾಕೆಂದರೆ ಈ ರೂಲ್ಸ್ ಫಾಲೋ ಮಾಡುವವರೇ ಇಲ್ಲ. ಬೆಳಗ್ಗೆನೂ ಓಡಾಡುತ್ತವೆ, ಸಂಜೆನೂ ಓಡಾಡುತ್ತವೆ.