ವಿಚ್ಚೇದನ ಕುರಿತು ಮಹತ್ವದ ತೀರ್ಪು ?

ಭಾನುವಾರ, 20 ಫೆಬ್ರವರಿ 2022 (12:17 IST)
ಕೇರಳ : ವಿವಾಹ ವಿಚ್ಚೇದನ ಕುರಿತು ಹಲವು ತೀರ್ಪುಗಳು ಆದೇಶಗಳು ದೇಶದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.
 
ವಿಫಲವಾದ ದಾಂಪತ್ಯದಲ್ಲಿ ವಿಚ್ಚೇದನ ನಿರಾಕರಿಸುವುದು ಕೌರ್ಯಕ್ಕೆ ಸಮಾನ ಎಂದು ಕೇರಳ ಹೈಕೋರ್ಟ್ ವಿವಾಹ ವಿಚ್ಚೇದನ ಕುರಿತು ಮಹತ್ವದ ತೀರ್ಪು ನೀಡಿದೆ. ಇಷ್ಟೇ ಅಲ್ಲ ಸಂಬಂಧ ಮುರಿದು ಬಿದ್ದ ಮೇಲೆ ಜೊತೆಯಾಗಿ ಹೋಗಲು ಒತ್ತಾಯಿಸಬಾರದು ಎಂದು ಹೈಕೋರ್ಟ್ ಹೇಳಿದೆ.

ಕೇರಳ ಹೈಕೋರ್ಟ್ ವಿಭಾಗೀಯ ಪೀಠದ ಜಸ್ಟೀಸ್ ಎ ಮುಹಮ್ಮದ್ ಮುಸ್ತಾಖ್ ಈ ಮಹತ್ವದ ತೀರ್ಪು ನೀಡಿದ್ದಾರೆ. ದಂಪತಿಗಳು ವಿಚ್ಚೇದ ಕುರಿತು ನೆಡುಮಂಗಾಡ್ ಕೌಟುಂಬಿಕ ನ್ಯಾಯಾಲಯ ನೀಡಿದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಪತ್ನಿಯ ಅರ್ಜಿ ವಿಚಾರಣೆ ನಡೆಸಿ ಈ ಆದೇಶ ನೀಡಿದೆ.

ದಾಂಪತ್ಯ ಸಂಪೂರ್ಣವಾಗಿ ಮುರಿದು ಬಿದ್ದು, ಇನ್ನು ಜೊತೆಯಾಗಿ ಹೋಗಲು ಸಾಧ್ಯವಿಲ್ಲ ಎನ್ನು ಪರಿಸ್ಥಿತಿ ಇದ್ದರೆ, ದಂಪತಿಗಳಲ್ಲಿ ಯಾರಾದರೊಬ್ಬರು ವಿಚ್ಚೇದನ ನಿರಾಕರಿಸಿದರೆ ಅದು ಕ್ರೌರ್ಯಕ್ಕೆ ಸಮಾನ ಎಂದು ಹೈಕೋರ್ಟ್ ಹೇಳಿದೆ.

ಸಂಬಂಧವನ್ನು ಮತ್ತೆ ಸರಿಪಡಿಸಲಾಗದಷ್ಟು ಹಳಸಿದ್ದರೆ ದಂಪತಿಗಳನ್ನು ಸಂಬಂಧ ಮುಂದುವರಿಸಲು ಕಾನೂನಾತ್ಮಕವಾಗಿ ಒತ್ತಾಯಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ