ರಾಜ್ಯಾದ್ಯಂತ ಖಾಕಿ ಕಣ್ಗಾವಲು?

ಬುಧವಾರ, 16 ಫೆಬ್ರವರಿ 2022 (09:23 IST)
ಬೆಂಗಳೂರು : ಹಿಜಾಬ್-ಕೇಸರಿ ಶಾಲು ವಿವಾದ ಇಡೀ ರಾಜ್ಯವನ್ನು ಆತಂಕಕ್ಕೆ ನೂಕಿದೆ.
 
ಇದರಿಂದಾಗಿ ಒಂದು ವಾರದಿಂದ ಬಂದ್ ಆಗಿದ್ದ ಕಾಲೇಜ್ಗಳ ಬಾಗಿಲು, ಇಂದು ಓಪನ್ ಆಗ್ತಿವೆ. ಕಾಲೇಜಿನಲ್ಲಿ ಕಿಡಿ ಮತ್ತೆ ಹೊತ್ತಿಕೊಳ್ಳುತ್ತಾ ಅನ್ನೋ ಟೆನ್ಷನ್ ಹೆಚ್ಚಾಗಿದೆ.

ಇದು ಸರ್ಕಾರಕ್ಕೆ ಮತ್ತೊಂದು ಚಾಲೆಂಜ್ ಎದುರಾಗಿದ್ದು, ಎಲ್ಲಾ ಕಾಲೇಜುಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ. ಹಿಜಾಬ್-ಕೇಸರಿ ಶಾಲಿನ ವಿವಾದ ವಿದ್ಯಾ ದೇಗುಲದಲ್ಲಿ ದಳ್ಳುರಿಯನ್ನೇ ಎಬ್ಬಿಸಿದೆ. ಹಿಜಾಬ್ ಜ್ವಾಲೆ ರಾಜ್ಯಾದ್ಯಂತ ಕಾಲೇಜುಗಳಲ್ಲಿ ಕೆಂಡವಾಗಿದ್ವು. ಫೆ. 8 ರಂದು ಅಂದ್ರೆ ವಾರದ ಹಿಂದೆ ಇಡೀ ಕಾಲೇಜ್ ಆವರಣವೇ ರಣಾಂಗಣವಾಗಿತ್ತು.

ಖಾಕಿ ಲಾಠಿ ಸದ್ದು ಮಾಡಿತ್ತು. ಉಡುಪಿ ಎಂಜಿಎಂ ಕಾಲೇಜಿನಲ್ಲಿ ದೊಡ್ಡ ಕದನವೇ ನಡೆದಿತ್ತು. ಶಿವಮೊಗ್ಗದಲ್ಲಿ ಕಲ್ಲುತೂರಾಟ ನಡೆದು ಪ್ರಕ್ಷುಬ್ದ ಸ್ಥಿತಿ ನಿರ್ಮಾಣವಾಗಿತ್ತು. ಇನ್ನೂ ದಾವಣಗೆರೆಯಲ್ಲಿ ಅಶ್ರುವಾಯು ಸಿಡಿಸಿ ಪರಿಸ್ಥಿತಿ ಹತೋಟಿಗೆ ತರಲಾಗಿತ್ತು.

ಲಾಠಿ ಚಾರ್ಜ್ ನಡೆದು ದೊಡ್ಡ ದಂಗೆಯೇ ಎದ್ದಿತ್ತು. ಕಾಲೇಜ್ ರಣಾಂಗಣವಾದ ಬಳಿಕ ಸರ್ಕಾರ ಫೆಬ್ರವರಿ 9ರಿಂದ 15ರ ವರೆಗೆ ಕಾಲೇಜುಗಳಿಗೆ ರಜೆ ಘೋಷಿಸಿತ್ತು. ಒಂದು ವಾರದ ಬಳಿಕ ಅಂದ್ರೆ ಇಂದಿನಿಂದ ಕಾಲೇಜಿನ ಬಾಗಿಲು ತೆರೆಯುತ್ತಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ