ಭೀಕರ ಭೂಕಂಪ: ಸಾವಿನ ಸಂಖ್ಯೆ 2012ಕ್ಕೆ ಏರಿಕೆ!

ಭಾನುವಾರ, 10 ಸೆಪ್ಟಂಬರ್ 2023 (07:33 IST)
ರಬತ್ : ಮೊರಾಕ್ಕೋ ಭೀಕರ ಭೂಕಂಪಕ್ಕೆ 2,012ಕ್ಕೂ ಹೆಚ್ಚು ಜನ ಮೃತಪಟ್ಟಿದ್ದು, 2,059 ಜನ ಗಾಯಗೊಂಡಿದ್ದಾರೆ. ಇದರಲ್ಲಿ 1,404 ಮಂದಿ ಗಂಭೀರ ಪರಿಸ್ಥಿತಿಯಲ್ಲಿದ್ದಾರೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ.

ವಸತಿ ಕಳೆದುಕೊಂಡವರು ಸಿಕ್ಕ ಜಾಗದಲ್ಲಿ ಆಶ್ರಯ ಪಡೆದುಕೊಳ್ಳುತ್ತಿದ್ದಾರೆ. ಅವರ ರಕ್ಷಣೆಗಾಗಿ ಶ್ರಮಿಸಲಾಗುತ್ತಿದೆ. ಐತಿಹಾಸಿಕ ಕಟ್ಟಡಗಳೂ ಸೇರಿದಂತೆ ಮಸೀದಿ ಹಾಗೂ ಮನೆಗಳು ಉರುಳಿಬಿದ್ದಿವೆ. ಇವುಗಳ ಅವಶೇಷಗಳ ಅಡಿ ಹಲವಾರು ಜನ ಸಿಲುಕಿ ಮೃತಪಟ್ಟಿದ್ದಾರೆ. ಶವಗಳನ್ನು ಹೊರ ತೆಗೆಯುವ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶುಕ್ರವಾರ ತಡರಾತ್ರಿ ಸಂಭವಿಸಿದ ಭೂಕಂಪದಿಂದ ಈ ಮಟ್ಟದ ಹಾನಿ ಸಂಭವಿಸಿದೆ. ಈ ಭೂಕಂಪ 6.8 ರಷ್ಟು ತೀವ್ರತೆ ಹೊಂದಿತ್ತು. ಭೂಕಂಪದ ಕೇಂದ್ರಬಿಂದು ಮಾರಾಕೆಚ್ನ ನೈಋತ್ಯಕ್ಕೆ 72 ಕಿಮೀ ದೂರದಲ್ಲಿದೆ. ಭೂಕಂಪವು 18.5 ಕಿಮೀ ಆಳದಲ್ಲಿ ಆಗಿರುವುದು ದಾಖಲಾಗಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ತಿಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ