ದುರಂತ ಸಂಭವಿಸೋದಕ್ಕೂ ಮುನ್ನವೇ ಎಚ್ಚೆತ್ತ ಸರ್ಕಾರ

ಮಂಗಳವಾರ, 22 ನವೆಂಬರ್ 2022 (15:11 IST)
ಡೆಹ್ರಾಡೂನ್ : ಉತ್ತರಾಖಂಡದ ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರ ನಿರ್ದೇಶನದ ಮೇರೆಗೆ ರಾಜ್ಯದ 5 ವಲಯಗಳಲ್ಲಿ ನಡೆಸಿದ ಸೇತುವೆ ಸುರಕ್ಷತಾ ಲೆಕ್ಕ ಪರಿಶೋಧನೆಯಲ್ಲಿ 36 ಸೇತುವೆಗಳು ಸಂಚಾರಕ್ಕೆ ಅನರ್ಹವಾಗಿರುವುದು ಕಂಡುಬಂದಿದೆ.

ಗುಜರಾತಿನ ಮೋರ್ಬಿ ತೂಗುಸೇತುವೆ ದುರಂತದ ಬಳಿಕ ಎಚ್ಚೆತ್ತ ಮುಖ್ಯಮಂತ್ರಿಗಳು ನವೆಂಬರ್ 3 ರಂದು ಪರಿಶೀಲನೆ ನಿರ್ದೇಶನ ನೀಡಿದ್ದರು. ಅದರಂತೆ ಲೋಕೋಪಯೋಗಿ ಇಲಾಖೆ ಸುರಕ್ಷತಾ ಪರಿಶೀಲನೆ ನಡೆಸಿತ್ತು.

ಇದೀಗ ರಾಜ್ಯದಲ್ಲಿರುವ 3,262 ಸೇತುವೆಗಳ ಪೈಕಿ 2,618 ಸೇತುವೆಗಳ ಸುರಕ್ಷತಾ ಲೆಕ್ಕ ಪರಿಶೋಧನಾ ವರದಿಯನ್ನು ಪಿಡಬ್ಲ್ಯೂಡಿ ಇಲಾಖೆ, ಸರ್ಕಾರಕ್ಕೆ ಹಸ್ತಾಂತರಿಸಿದೆ.

ಇದರಲ್ಲಿ 36 ಸೇತುವೆಗಳು ಸಂಚಾರಕ್ಕೆ ಅನರ್ಹವಾಗಿದೆ ಎಂದು ಅಧಿಕಾರಿಗಳು ಆಡಿಟ್ ವರದಿಯ ಮೂಲಕ ತಿಳಿಸಿರುವುದಾಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಆರ್.ಕೆ.ಸುಧಾಂಶು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ