ಸೋಂಕಿತರ ಜೀವಕ್ಕೆ ಅಪಾಯ!?

ಗುರುವಾರ, 27 ಜನವರಿ 2022 (12:46 IST)
ಇನ್ನು ಮತ್ತೊಂದು ಕಡೆ SARI, ILI ಸೋಂಕಿತರು ಅತಿ ಹೆಚ್ಚು ಕೋವಿಡ್ ಗೆ ಬಲಿಯಾಗುತ್ತಿದ್ದಾರೆ.
 
ಸಕ್ಕರೆ ಖಾಯಿಲೆ, ಹೈಪರ್ ಟೆನ್ಷನ್ ಬಿಪಿ, ಲಂಗ್ ಡಿಸೀಸ್ ಗೆ ಒಳಗಾದ ಸೋಂಕಿತರು ಹೆಚ್ಚಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅಲ್ಲದೆ ಜ್ವರ, ಕೆಮ್ಮು, ಉಸಿರಾಟದ ತೊಂದರೆ ಇರುವ ಸೋಂಕಿತರಿಗೆ ಹೆಚ್ಚು ಅಪಾಯ.

ಹೀಗಾಗಿ ಯಾವುದೇ ಕಾರಣಕ್ಕೂ ಮುಂದಿನ ಎರಡು ವಾರಗಳ ಕಾಲ ಕಠಿಣ ನಿಯಮಗಳನ್ನು ಸಡಿಲಗೊಳಿಸದಿರಲು ಟಾಸ್ಕ್ ಫೋರ್ಸ್ ಟೀಂ ನಿರ್ಧಾರ ಮಾಡಿದೆ. ಪರಿಸ್ಥಿತಿ ಕಾದು ನೋಡುವ ನಿರ್ಧಾರಕ್ಕೆ ಆರೋಗ್ಯ ಇಲಾಖೆ ಮುಂದಾಗಿದೆ.

ಪರಿಸ್ಥಿತಿ ಅವಲೋಕಿಸಿ ನಿರ್ಧಾರ ಕೈಗೊಳ್ಳಲು ಚಿಂತನೆ ನಡೆದಿದೆ. ಸದ್ಯದ ಮಟ್ಟಿಗೆ ರಿಸ್ಟ್ರಿಕ್ಷನ್ ಮುಂದುವರೆಸಲು ನಿರ್ಧಾರ ಮಾಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ