ಇಂದು ಪಂಚರಾಜ್ಯ ಚುನಾವಣಾ ಫಲಿತಾಂಶ

ಗುರುವಾರ, 10 ಮಾರ್ಚ್ 2022 (06:19 IST)
ಲಕ್ನೋ : ಇಂದು ಪಂಚರಾಜ್ಯ ಚುನಾವಣೆ ಫಲಿತಾಂಶ. ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಕಾತರರಾಗಿದ್ದಾರೆ.

ಎಕ್ಸಿಟ್ ಪೋಲ್  ಬಳಿಕ ಎಲ್ಲರೂ ತಮ್ಮದೇ ಆದ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದ್ದು, 11-12 ಗಂಟೆ ಹೊತ್ತಿಗೆ ಫಲಿತಾಂಶದ ಒಂದು ಚಿತ್ರಣ ಸಿಗಬಹುದು.

ಜನಸಂಖ್ಯೆ ಮತ್ತು ರಾಜಕೀಯದ ದೃಷ್ಟಿಯಿಂದ ಉತ್ತರ ಪ್ರದೇಶ ತುಂಬಾನೇ ಮುಖ್ಯವಾದುದು. 403 ಎಂಎಲ್ಎ, 80 ಎಂಪಿ, 31 ರಾಜ್ಯಸಭೆ ಸೀಟ್ ಹೊಂದಿರುವ ಉತ್ತರಪ್ರದೇಶದಲ್ಲಿ ಗೆದ್ದರೆ ದೆಹಲಿ ಗದ್ದುಗೆ ಸುಲಭ.

ಒಂದರ್ಥದಲ್ಲಿ ದೆಹಲಿ ಸೇರಲು ಉತ್ತರಪ್ರದೇಶ ಹೆದ್ದಾರಿ ಎಂದು ಪರಿಗಣಿಸಲಾಗುತ್ತದೆ. ಸದ್ಯ ಇಲ್ಲಿ ಬಿಜೆಪಿ ಸರ್ಕಾರವಿದೆ. ವಿಪಕ್ಷ ಎಸ್ಪಿ ಗದ್ದುಗೆ ಏರುವ ಕನಸು ಕಾಣುತ್ತಿದೆ. ಆದರೆ ನಿನ್ನೆ ರಾತ್ರಿ ನಡೆದ ಕೆಲವೊಂದಿಷ್ಟು ಬೆಳವಣಿಗೆಗಳು ಭಾರೀ ಚರ್ಚೆಗೆ ಗ್ರಾಸವಾಗಿದೆ.

ಇದೇ ವೇಳೆ ಇವಿಎಂ ಸಾಗಣೆ ವೇಳೆ ಪ್ರೋಟೋಕಾಲ್ ಉಲ್ಲಂಘನೆ ಆಗಿರೋದು ನಿಜ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ತೀವಿ ಎಂದಿದೆ. ಇವಿಎಂ ಪತ್ತೆ ಪ್ರಕರಣ ಸಂಬಂಧ ಸಮಾಜವಾದಿ ಪಕ್ಷ ಹೈಕೋರ್ಟ್ ಮೊರೆ ಹೋಗಿದೆ.

ಎಲ್ಲಾ ಸ್ಟ್ರಾಂಗ್ ರೂಂಗಳ ಮುಂದೆ ಎಸ್ಪಿ ಕಾರ್ಯಕರ್ತರು ಕಣ್ಣಿಗೆ ಎಣ್ಣೆ ಬಿಟ್ಕೊಂಡು ಕಾಯ್ತಿದ್ದಾರೆ. ಈ ನಡುವೆ ಕರ್ತವ್ಯ ಲೋಪದ ಆರೋಪದ ಮೇರೆಗೆ ವಾರಣಾಸಿ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ರನ್ನು ಚುನಾವಣಾ ಕರ್ತವ್ಯದಿಂದ ಚುನಾವಣಾ ಆಯೋಗ ಮುಕ್ತಗೊಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ