ಬೆಂಗಳೂರು : ನಗರದ ಎಲೆಕ್ಟ್ರಾನಿಕ್ ಸಿಟಿ ಹಾಗೂ ಅತ್ತಿಬೆಲೆ ಟೋಲ್ ಶುಲ್ಕ ಜುಲೈ 1 ರಿಂದ ಶೇ. 20 ರಷ್ಟು ಏರಿಕೆ ಕಾಣಲಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್ಎಚ್ಎಐ) ಟೋಲ್ ಹೆಚ್ಚಳದ ಬಗ್ಗೆ ಎಲಿವೇಟೆಡ್ ಟೋಲ್ವೇ ಕಂಪನಿ ಮನವಿ ಸಲ್ಲಿಸಿತ್ತು. ಈ ಮನವಿಗೆ ಎನ್ಎಚ್ಎಐ ಗ್ರೀನ್ ಸಿಗ್ನಲ್ ನೀಡಿದೆ.
ಪರಿಷ್ಕೃತ ಟೋಲ್ ಶುಲ್ಕ ಜುಲೈ 1 ರಿಂದ ಜಾರಿಗೆ ಬರಲಿದೆ. ಒಪ್ಪಂದದ ಪ್ರಕಾರ ರಸ್ತೆ ಬಳಕೆ ಶುಲ್ಕ ಹೆಚ್ಚಳ ಮಾಡಲಾಗಿದ್ದು, ಈ ಶುಲ್ಕವು 2023ರ ಜೂನ್ 30ರವರೆಗೆ ಜಾರಿಯಲ್ಲಿರಲಿದೆ ಎಂದು ಬೆಂಗಳೂರು ಎಲಿವೇಟೆಡ್ ಟೋಲ್ವೇ ಕಂಪನಿ ಅಧಿಕಾರಿಯೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ.
ಇತ್ತ ರಾಷ್ಟ್ರ ರಾಜಧಾನಿ ದೆಹಲಿಯಿಂದ ಡೆಹ್ರಾಡೂನ್ ಸಂಚರಿಸುವ ಎನ್ಎಚ್ 58 ರಸ್ತೆಯ ಟೋಲ್ ಕೂಡ ಜುಲೈ 1 ರಿಂದ ಏರಿಕೆ ಆಗಲಿದೆ. ಈಗಾಗಲೇ ಟೋಲ್ ಕಂಪನಿ 10 ರಿಂದ 15 ರೂ. ಏರಿಕೆಗೆ ಎನ್ಎಚ್ಎಐ ಮನವಿ ಸಲ್ಲಿಸಿತ್ತು. ಈ ಮನವಿಗೆ ಎನ್ಎಚ್ಎಐ ಒಪ್ಪಿಗೆ ಸೂಚಿಸಿದ್ದು, ಜುಲೈ 1 ರಿಂದ ಶುಲ್ಕ ಏರಿಕೆ ಕಾಣಲಿದೆ.