ಹೆಚ್3ಎನ್2 ಗೆ ದೇಶದಲ್ಲಿ ಇಬ್ಬರು ಬಲಿ!

ಶನಿವಾರ, 11 ಮಾರ್ಚ್ 2023 (07:15 IST)
ನವದೆಹಲಿ : ಇತ್ತೀಚೆಗೆ ಜನರಲ್ಲಿ ಭಯ ಉಂಟುಮಾಡುತ್ತಿರುವ ಹೆಚ್3ಎನ್2 ಸೋಕಿಗೆ ದೇಶದಲ್ಲೇ ಮೊದಲ ಬಾರಿ 2 ಸಾವುಗಳು ವರದಿಯಾಗಿದೆ. ಮೊದಲ ಸಾವು ಕರ್ನಾಟಕದ ಹಾಸನದಲ್ಲಿ ವರದಿಯಾಗಿದ್ದು, 2ನೇ ಸಾವು ಹರಿಯಾಣದಲ್ಲಿ ವರದಿಯಾಗಿದೆ.
 
ಕಳೆದ ಕೆಲ ತಿಂಗಳುಗಳಿಂದ ದೇಶದಲ್ಲಿ ಹೆಚ್3ಎನ್2 ವೈರಸ್ನಿಂದಾಗಿ ಜ್ವರದ ಪ್ರಕರಣಗಳು ಹೆಚ್ಚುತ್ತಿದೆ. ದೇಶದಲ್ಲಿ ಸುಮಾರು 90 ಹೆಚ್3ಎನ್2 ಪ್ರಕರಣಗಳು ವರದಿಯಾಗಿವೆ. 8 ಹೆಚ್1ಎನ್1 ಪ್ರಕರಣಗಳೂ ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಇದೀಗ ಭಾರತದಲ್ಲಿ ಪತ್ತೆಯಾಗುತ್ತಿರುವ ಹೆಚ್3ಎನ್2 ಹಾಗೂ ಹೆಚ್1ಎನ್1 ಸೋಂಕು ಎರಡೂ ಕೂಡಾ ಕೋವಿಡ್ನಂತೆಯೇ ಗುಣಲಕ್ಷಣಗಳನ್ನು ಹೊಂದಿವೆ. ಇದು ಪ್ರಪಂಚದಾದ್ಯಂತ ಲಕ್ಷಾಂತರ ಸಾವಿಗೆ ಕಾರಣವಾಗಿದೆ. ಇದೀಗ ಜನರು ಸಾಮಾನ್ಯ ಜ್ವರಕ್ಕೂ ಹೆಚ್ಚು ಆತಂಕಪಡುವಂತಾಗಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ