ವಿಜಯ್‍ಮಲ್ಯ ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದ ಪತ್ರದಲ್ಲಿ ಏನಿದೆ ಗೊತ್ತಾ?

ಮಂಗಳವಾರ, 26 ಜೂನ್ 2018 (19:22 IST)
ನವದೆಹಲಿ : ರಾಷ್ಟ್ರೀಕೃತ ಬ್ಯಾಂಕ್‍ಗಳಿಂದ ಕೋಟಿಗಟ್ಟಲೆ ಹಣ ಪಡೆದು ವಂಚನೆ ಮಾಡಿದ ವಿದೇಶಕ್ಕೆ ಹಾರಿದ  ಮದ್ಯದ ದೊರೆ ವಿಜಯ್‍ಮಲ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.


ವಿಜಯ್‍ಮಲ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಾವು ಎಲ್ಲ ಬಾಕಿ ಇರುವ ಸಾಲಗಳನ್ನು ಮರು ಪಾವತಿ ಮಾಡುತ್ತೇನೆ ಎಂದು ಈ ಪತ್ರದ ಮೂಲಕ ತಿಳಿಸದ್ದಾರೆ. ಮಲ್ಯ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಂಡು ಅವರನ್ನು ದೇಶಭ್ರಷ್ಟ , ಆರ್ಥಿಕ ಅಪರಾಧಿ ಹಾಗೂ ಉದ್ದೇಶಪೂರ್ವಕ ಸುಸ್ತಿದಾರ ಎಂದು ಘೋಷಿಸಿ 12,500 ಕೋಟಿ ರೂ. ಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಮುಂದಾದ ಹಿನ್ನಲೆಯಲ್ಲಿ ವಿಜಯ್‍ಮಲ್ಯ ಅವರು ಈ ಸಾಲಗಳನ್ನು ಮರು ಪಾವತಿ ಮಾಡುವ ನಿರ್ಧಾರ ಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ