ಬೊಮ್ಮಾಯಿ 2022ರ ಬಜೆಟ್ ಗಾತ್ರ ಎಷ್ಟು?

ಶುಕ್ರವಾರ, 4 ಮಾರ್ಚ್ 2022 (13:48 IST)
ಮೊದಲ ಬಾರಿಗೆ 2022-23ನೇ ಸಾಲಿಗೆ ಇಂದು ಮಾರ್ಚ್ 4ನೇ ತಾರೀಕಿನ ಶುಕ್ರವಾರದಂದು ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, 2,65,720 ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡಿಸಿದ್ದಾರೆ.
 
ಇದರಲ್ಲಿ ಒಟ್ಟು ಸ್ವೀಕೃತಿ 2,61,972 ಕೋಟಿ ರೂ., ರಾಜಸ್ವ ಸ್ವೀಕೃತಿ 1,89,888 ಕೋಟಿ ರೂಪಾಯಿ, ಸಾರ್ವಜನಿಕ ಸಾಲ 72 ಸಾವಿರ ಕೋಟಿ ರೂಪಾಯಿ ಸೇರಿದಂತೆ ಬಂಡವಾಳ ಸ್ವೀಕೃತಿ 72,009 ಕೋಟಿ ರೂಪಾಯಿ ಅಂದಾಜಿಸಿದ್ದಾರೆ. ಇ

ನ್ನು ವೆಚ್ಚದ ಕಡೆಗೆ ನೋಡಿದರೆ 2,65,720 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಇದರಲ್ಲಿ ರಾಜಸ್ವ ವೆಚ್ಚ 2,04,587 ಕೋಟಿ, ಬಂಡವಾಳ ವೆಚ್ಚ 46,595 ಕೋಟಿ ರೂಪಾಯಿ ಹಾಗೂ ಸಾಲ ಮರುಪಾವತಿಗೆ 14,179 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ