ಐಫೋನ್‌ಗಳಲ್ಲಿ ವಾಟ್ಸಪ್ ಸ್ಥಗಿತ!

ಸೋಮವಾರ, 23 ಮೇ 2022 (15:22 IST)
ವಾಷಿಂಗ್ಟನ್ : ವಾಟ್ಸಪ್ ಅಕ್ಟೋಬರ್ ತಿಂಗಳಿನಿಂದ ಕೆಲವು ಐಫೋನ್ ಮಾಡೆಲ್ಗಳಲ್ಲಿ ಕಾರ್ಯನಿರ್ವಹಿಸುವುದನ್ನು ಸ್ಥಗಿತಗೊಳಿಸಲಿದೆ ಎಂದು ವರದಿಯಾಗಿದೆ.

ಮೆಟಾ ಮಾಲೀಕತ್ವದ ವಾಟ್ಸಪ್ ಐಫೋನ್ನ ಆಯ್ದ ಮಾಡೆಲ್ಗಳಲ್ಲಿ ಕಾರ್ಯ ನಿರ್ವಹಿಸುವುದನ್ನು ಅಕ್ಟೋಬರ್ 24ರಿಂದ ನಿಲ್ಲಿಸಲಿದೆ ಎಂದು ವರದಿಯಾಗಿದೆ. ವಾಟ್ಸಪ್ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿಲ್ಲವಾದರೂ ಸ್ಥಗಿತಗೊಳಿಸುವ ದಿನ ಹತ್ತಿರವಾದಂತೆ ಇದನ್ನು ದೃಢೀಕರಿಸುವ ಸಾಧ್ಯತೆ ಇದೆ.

ವೆಬಿಟೈನ್ಫೋ ಇತ್ತೀಚಿನ ವರದಿ ಪ್ರಕಾರ, ಆಪಲ್ ಕೆಲವು ಐಫೋನ್ ಬಳಕೆದಾರರಿಗೆ ವಾಟ್ಸಪ್ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುವ ಬಗ್ಗೆ ಎಚ್ಚರಿಕೆ ನೀಡಿದೆ.

ಐಒಎಸ್ 10 ಹಾಗೂ ಐಒಎಸ್ 11 ಸಾಫ್ಟ್ವೇರ್ ಉಳ್ಳ ಐಫೋನ್ಗಳಲ್ಲಿ ವಾಟ್ಸಪ್ನ ಸಂದೇಶ ಸೇವೆ ಕಾರ್ಯನಿರ್ವಹಿಸುವುದನ್ನು ಸ್ಥಗಿತಗೊಳಿಸಲಿದೆ. ಹೀಗಾಗಿ ನಿಮ್ಮ ಐಪೋನ್ ಅನ್ನು ನವೀಕರಿಸಿ(ಅಪ್ಡೇಟ್) ಅಥವಾ ಪರಿಣಾಮ ಎದುರಿಸಲು ಸಿದ್ಧರಾಗುವಂತೆ ತಿಳಿಸಿದೆ. 

ವಾಟ್ಸಪ್ನ ಸ್ಥಗಿತವನ್ನು ಎದುರಿಸಬಹುದಾದ ಆಪಲ್ ಫೋನ್ಗಳೆಂದರೆ ಐಫೋನ್ 5 ಹಾಗೂ ಐಫೋನ್ 5ಸಿ ಆಗಿದೆ. ನೀವು ಐಪೋನ್ ಹೊಂದಿದ್ದರೆ, ನಿಮ್ಮ ಫೋನ್ ಇತ್ತೀಚಿನ ಸಾಫ್ಟ್ವೇರ್ ಆವೃತ್ತಿಗೆ ಅಪ್ಡೇಟ್ ಆಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. 

ನಿಮ್ಮ ಐಫೋನ್ ಯಾವ ಸಾಫ್ಟ್ವೇರ್ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಪರಿಶೀಲಿಸಲು, ‘ಸೆಟ್ಟಿಂಗ್ಸ್ ಮೆನು’ ಹೋಗಿ, ‘ಎಬೌಟ್’ ಬಳಿಕ ‘ಸಾಫ್ಟ್ವೇರ್’ ಅಪ್ಡೇಟ್ ಕ್ಲಿಕ್ ಮಾಡಿ. ಇತ್ತೀಚಿನ ಹೆಚ್ಚಿನ ಆಪಲ್ ಪೋನ್ಗಳು ಐಒಎಸ್ 15ರ ಆವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ