ಉತ್ಪಾದಕ ಚಕ್ರದ ಅದೃಷ್ಟ

ಪ್ರಕೃತಿಯಲ್ಲಿ ಐದು ಬಗೆಯ ಮೂಲಾಧಾರಗಳು, ಮೂಲತತ್ವಗಳು ಇರುತ್ತವೆ. ಅದುವೇ ಕಾಷ್ಠ, ಅಗ್ನಿ, ಪೃಥ್ವಿ, ಧಾತು ಹಾಗೂ ಜಲ. ಈ ಮೂಲಾಧಾರಗಳು ಎರಡು ಬಗೆಯಿಂದ ಪರಸ್ಪರ ಸಂಬಂಧ ಹೊಂದಿರುತ್ತವೆ. ಅರ್ಥಾತ್ ಎರಡು ಬಗೆಯ ಕಾಲಚಕ್ರಗಳನ್ನು ಈ ಮೂಲತತ್ವಗಳು ಹೊಂದಿರುತ್ತವೆ.

ಒಂದು ಉತ್ಪಾದಕ ಚಕ್ರ ಹಾಗೂ ಮತ್ತೊಂದು ವಿಧ್ವಂಸಕ ಚಕ್ರ. ಉತ್ಪಾದಕ ಚಕ್ರ ಹೇಗಿರುತ್ತದೆ ಎಂದರೆ, ಕಾಷ್ಠ-ಅಗ್ನಿ-ಪೃಥ್ವಿ-ಧಾತು-ಜಲ ಈ ಕ್ರಮದಲ್ಲಿರುತ್ತದೆ. ಅಂದರೆ ಕಾಷ್ಠದಿಂದ ಅಗ್ನಿ ಉತ್ಪತ್ತಿಯಾಗುತ್ತದೆ. ಕಟ್ಟಿಗೆ ಸುಟ್ಟಾಗ ಬೆಂಕಿ ಬರುತ್ತದೆ ಎಂಬುದು ಉದಾಹರಣೆಯ ಅದೇ ರೀತಿ ಅಗ್ನಿಯು ಪೃಥ್ವಿಯ ಸೃಷ್ಟಿಗೆ ಕಾರಣವಾಗುತ್ತದೆ. ಅಂದರೆ ಅಗ್ನಿಯು ಉರಿದು ಬೂದಿ (ಪೃಥ್ವಿ) ನಿರ್ಮಾಣವಾಗುತ್ತದೆ.

ಈ ಪೃಥ್ವಿಯಿಂದ ಧಾತು ಉದ್ಭವವಾಗುತ್ತದೆ. ಅಂದರೆ ಭೂಮಿಯ ಗರ್ಭದಿಂದ ಗಣಿಗಾರಿಕೆ ನಡೆಸಿ ಖನಿಜವನ್ನು ಎಳೆಯುತ್ತಾರೆ. ಈ ಧಾತುವು ಕರಗಿದಾಗ ಜಲೋತ್ಪನ್ನವಾಗುತ್ತದೆ. ಅಂದರೆ ಜಲದಂತೆ ದ್ರವ ಸ್ಥಿತಿಗೆ ಧಾತು ತಿರುಗುತ್ತದೆ. ಈ ಜಲದಿಂದಾಗಿಯೇ ಕಾಷ್ಠವು ಅಂದರೆ ಗಿಡ ಮರಗಳು, ಸಸ್ಯಗಳು ಬೆಳೆಯುತ್ತವೆ.
ಈ ಮೂಲ ತತ್ವಗಳ ಚಕ್ರ ಅರ್ಥ ಮಾಡಿಕೊಂಡರೆ ಸುಲಭವಾಗುತ್ತದೆ.

ವೆಬ್ದುನಿಯಾವನ್ನು ಓದಿ