ಮನೆಗೆ ಅಡಿಪಾಯ: ಮುಖ್ಯ ವಿಷಯಗಳು

ಮನೆಯ ನಿರ್ಮಾಣದ ಬಗ್ಗೆ ನಾವು ವಾಸ್ತು ಪರವಾಗಿ ಚಿಂತಿಸುವಾಗ, ಸಾಧಾರಣ ನಾವು ಅಡಿಪಾಯ (ಅಡಿ ಕಲ್ಲು) ಹಾಕುವುದರ ಬಗ್ಗೆ ಹೆಚ್ಚು ಗಮನವನ್ನು ನೀಡುವುದಿಲ್ಲ. ವಾಸ್ತು ಶಾಸ್ತ್ರದ ಪ್ರಕಾರ ಅಡಿಕಲ್ಲಿಗೆ ಹೆಚ್ಚು ಪ್ರಾಶಸ್ತ್ಯವನ್ನು ನೀಡುವುದರಿಂದ ಮನೆಯು ಸುದೃಢವಾಗಿರುತ್ತದೆ.

ಮನೆ ಕಟ್ಟಲು ಅಡಿಕಲ್ಲು ಹಾಕುವ ಮೊದಲು ಭೂಮಿ ಪೂಜೆ ನಡೆಸಿ ವಾಸ್ತು ಪುರುಷನನ್ನು ಸಂತೋಷಗೊಳಿಸಬೇಕು. ಪೂಜೆ ನಡೆಸಿದ ನಂತರವೂ ಕೆಲವು ಕಾರ್ಯಗಳ ಬಗ್ಗೆ ಹೆಚ್ಚು ಶ್ರದ್ಧೆ ವಹಿಸ ಬೇಕೆಂದು ವಾಸ್ತುಶಾಸ್ತ್ರವು ಹೇಳುತ್ತದೆ.

ಕೆಲವು ಅಶುಭಕರವಾದ ಶಬ್ದ ಅಥವಾ ಸನ್ನಿವೇಷಗಳು ಈ ಸಮಯದಲ್ಲಿ ತಲೆದೋರಿದರೆ ಈ ಸಮಾರಂಭವನ್ನು ಇನ್ನೊಂದು ಮುಹೂರ್ತಕ್ಕೆ ಮುಂದೂಡುವುದು ಒಳ್ಳೆಯದು.
1. ಪೂಜೆ ನಡೆಸುವಂತಹ ಪೂಜಾರಿಗೆ ಆಪತ್ತು ತಲೆದೋರುವುದು.

2.ಶತ್ರುಗಳೊಂದಿಗೆ ಕಲಹ ಸಾಧ್ಯತೆಗಳು

3. ಗುಡುಗು ಮಿಂಚು

4.ಅಶುಭಕರವಾದ ವಾರ್ತೆಗಳು ಕೇಳಿಬರುವುದು.

5. ಅಳುವ ಶಬ್ದ

6.ಮನೆಯಲ್ಲಿ ಅಶುದ್ದವಾಗುವುದು

7.ಜ್ವಲಿಸುವ ಅಗ್ನಿ

8.ಹಾವಾಡಿಗ

9.ವಿಧವೆಯ ದರ್ಶನ

10.ಪೂಜಾ ಸಾಮಾಗ್ರಿಗಳು ಚಲ್ಲಾಪಿಲ್ಲಿಯಾಗುವುದು.

11.ತೆಂಗಿನಕಾಯಿ ಒಡೆದು ಹೋಗುವುದು.

12.ಆಯುಧಗಳು

ಮೇಲೆ ಹೇಳಿದಂತಹ ಶಕುನಗಳು ಅಡಿಕಲ್ಲು ಹಾಕುವಾಗ ಎದುರಾದರೆ ಅಶುಭಕರವೆಂದು ವಾಸ್ತು ಶಾಸ್ತ್ರಜ್ಞರ ಅಭಿಪ್ರಾಯ. ಇದರ ಪರಿಹರಿಸಲು ಇನ್ನೊಂದು ದಿನದ ಒಳ್ಳೆಯ ಮುಹೂರ್ತಕ್ಕೆ ಈ ಸಮಾರಂಭವನ್ನು ಮುಂದೂಡ ಬೇಕೆಂದು ಬಲ್ಲವರು ಹೇಳುತ್ತಾರೆ.

ವೆಬ್ದುನಿಯಾವನ್ನು ಓದಿ