ಭೋಜನ ಕೋಣೆ ಹೇಗಿರಬೇಕು?

ಶನಿವಾರ, 8 ಮಾರ್ಚ್ 2014 (10:58 IST)
PR
ಮನೆಯ ಕೋಣೆಗಳ ಬಗ್ಗೆ ಉಲ್ಲೇಖಿಸುವಾಗ ಭೋಜನ ಕೋಣೆಯ ಬಗ್ಗೆಯೂ ಗಮನ ಹರಿಸಬೇಕಾದುದು ಮುಖ್ಯ. ಯಾಕೆಂದರೆ ನಾವು ಸೇವಿಸುವ ಆಹಾರ ಎಷ್ಟೇ ಉತ್ತಮವಾಗಿದ್ದರೂ ಅದನ್ನು ಸೇವಿಸುವ ಸ್ಥಳ ಅಥವಾ ಪರಿಸರವು ಉತ್ತಮ ಮತ್ತು ಆರಾಮದಾಯಕವಾಗಿದ್ದರೆ ಮಾತ್ರ ಆಹಾರವು ಸರಿಯಾಗಿ ಪಚನಗೊಳ್ಳುವುದು.

ಸೂಕ್ತ ಸ್ಥಳದಲ್ಲಿ ಆಹಾರ ಸೇವಿಸುವುದರಿಂದ ದೇಹಕ್ಕೆ ಆರೋಗ್ಯವೂ ಮನಸ್ಸಿಗೆ ಹಿತವೂ ಲಭಿಸುತ್ತದೆ. ಮನೆಯಲ್ಲಿ ಆಹಾರ ಸೇವನೆಗಾಗಿ ಭೋಜನೆ ಕೋಣೆ ಇರುವುದು ಸಾಮಾನ್ಯ. ಅಲ್ಲಿರುವ ವಸ್ತುಗಳನ್ನು ಚೊಕ್ಕವಾಗಿ ಇಟ್ಟರೆ ಮಾತ್ರ ಅಲ್ಲಿ ಭೋಜನ ಸೇವಿಸಲು ಹಿತವೆನಿವುದು. ಭೋಜನ ಕೋಣೆಯಲ್ಲಿ ವಸ್ತುಗಳ ಇರಿಸುವಿಕೆಯು ಜೀವನದ ಮೇಲೆ ಪ್ರಭಾವವನ್ನು ಬೀರುತ್ತದೆ ಎಂದು ಫೆಂಗ್‌ಶುಯಿ ಶಾಸ್ತ್ರ ಹೇಳುತ್ತದೆ.

ಎಂದಿಗೂ ಮನೆಯ ಮುಖ್ಯದ್ವಾರಕ್ಕೆ ಎದುರಾಗಿ ಭೋಜನದ ಮೇಜನ್ನು ಇರಿಸಬೇಡಿ. ಸ್ನಾನಗೃಹದ ಹತ್ತಿರ ಅಥವಾ ಮುಂಭಾಗದಲ್ಲಿ ಮೇಜನ್ನು ಇರಿಸಲೇಬೇಡಿ. ಎರಡು ಕೋಣೆಗಳನ್ನು ವಿಂಗಡಿಸುವಂತೆ ಮಧ್ಯದಲ್ಲಿರಿಸಬೇಡಿ.

ನಿಮ್ಮ ಭೋಜನದ ಮೇಜು ಅಡಿಗೆ ಕೋಣೆಗೆ ಮುಖಮಾಡಿದೆ ಅಥವಾ ಅಲ್ಲಿಯೇ ಇದೆಯೆಂದಾದರೆ ಅದು ಮಾನಸಿಕ ಒತ್ತಡವನ್ನುಂಟು ಮಾಡುತ್ತದೆ. ಹವಾನಿಯಂತ್ರಕ, ಫ್ಯಾನ್‌ ಮೊದಲಾದುವುಗಳನ್ನು ಭೋಜನ ಕೋಣೆಯ ಎಡಭಾಗಕ್ಕಿರಿಸುವುದು ಉತ್ತಮ.ಭೋಜನ ಕೋಣೆಯು ಆದಷ್ಟು ಶುಚಿ ಹಾಗೂ ವಾಯುಯುಕ್ತವಾಗಿರಲಿ.

ವೆಬ್ದುನಿಯಾವನ್ನು ಓದಿ