ಈಶ್ವರನ ಸ್ಥಾನ ಈಶಾನ್ಯ

ವಾಸ್ತುಶಾಸ್ತ್ರದಲ್ಲಿ ಈಶಾನ್ಯ ದಿಕ್ಕಿಗೆ ಇರುವಷ್ಟು ಮಹತ್ವ ಬೇರಾವ ದಿಕ್ಕಿಗೂ ಇಲ್ಲವೆಂದು ಗುರುಗಳು ಹೇಳುತ್ತಾರೆ. ಈಶಾನ್ಯ ದಿಕ್ಕಿನ ಅಧಿಪತಿ ಸದಾಶಿವನಾದ ಈಶ್ವರನಾಗಿರುತ್ತಾನೆ. ಅದರಲ್ಲಿಯು ಇದು ವಾಸ್ತುಪುರುಷನ ಶಿರಸ್ಥಾನವಾಗಿದೆ(ತಲೆ). ಆದ್ದರಿಂದ ಮನೆಯ ಈಶಾನ್ಯ ಭಾಗದಲ್ಲಿ ದೇವರ ಕೋಣೆ ಕಟ್ಟುವುದು ನಮ್ಮ ಎಲ್ಲಾ ರೀತಿಯ ಪ್ರಗತಿಗೆ ಒಳ್ಳೆಯದು. ಕಾರಣ ಆ ಸ್ಥಾನವನ್ನು ಶುಚಿಯಾಗಿಡುವುದಾಗಿದೆ.

ಒಂದು ವೇಳೆ ನಿಮ್ಮ ಮನೆಯಲ್ಲಿ ಈಶಾನ್ಯ ಭಾಗದಲ್ಲಿ ದೇವರ ಕೋಣೆ ಇಲ್ಲದಿದ್ದರೆ, ಆ ಭಾಗವನ್ನು ಶುಚಿಯಾಗಿ, ಆ ಸ್ಥಳದಲ್ಲಿ ಹೆಚ್ಚು ಭಾರಗಳನ್ನು ಹಾಕದೆ, ಅಕ್ವೇರಿಯಮ್ ಅಥವಾ ಇತರ ನೀರಿನ ಮೂಲಕ್ಕೆ ಸಂಬಂಧಿಸಿದವುಗಳನ್ನು ಆ ಸ್ಥಾನದಲ್ಲಿಡಬಹುದು, ಆದರೆ ಯಾವುದೇ ಕಾರಣಕ್ಕೂ ಅಲ್ಲಿ ಟಿ.ವಿ, ಕಂಪ್ಯೂಟರ್, ಬಲ್ಬ್‌ಗಳಂತಹ ಬೆಂಕಿಯ ಮೂಲಗಳನ್ನಿಡಬೇಡಿ.

ಈ ಭಾಗದಲ್ಲಿ ಭಾರ ಹೆಚ್ಚಿದಷ್ಟು ನಿಮ್ಮ ಮನಃಶಾಂತಿ ಮತ್ತು ಮನೆಯ ಶಾಂತಿಯನ್ನು ಹಾಳುಮಾಡಲು ಕಾರಣವಾಗುತ್ತದೆ. ಈ ಭಾಗದಲ್ಲಿ ಅಡುಗೆ ಮನೆ ಇದ್ದರೆ ಅದನ್ನು ಆದಷ್ಟು ಬೇಗ ತೆರವುಗೊಳಿಸಿ. ಇಲ್ಲವಾದಲ್ಲಿ ನಿಮಗೆ ಎಲ್ಲಾ ರೀತಿಯಿಂದಲೂ ಹಾನಿ ತಪ್ಪಿದ್ದಲ್ಲ. ಅಡುಗೆ ಮನೆಗೆ ಯೋಗ್ಯ ಸ್ಥಾನ ಆಗ್ನೇಯವಾಗಿರುತ್ತದೆ.

ವೆಬ್ದುನಿಯಾವನ್ನು ಓದಿ