ಉತ್ತಮ ಆರೋಗ್ಯಕ್ಕಾಗಿ ಶಾಸ್ತ್ರಗಳ ಪ್ರಕಾರ ಈ ವಾರ ಈ ಧಾನ್ಯಗಳನ್ನೇ ಸೇವಿಸಿ

ಶನಿವಾರ, 13 ಅಕ್ಟೋಬರ್ 2018 (14:33 IST)
ಬೆಂಗಳೂರು : ಬೇಳೆ ಕಾಳುಗಳು ಆರೋಗ್ಯಕ್ಕೆ ತುಂಬಾ ಒಳ್ಳೇಯದು ಎಂಬ ವಿಚಾರ ಎಲ್ಲರಿಗೂ ತಿಳಿದೆ ಇದೆ. ಇವುಗಳನ್ನು ಸೇವಿಸುವುದರಿಂದ ದೇಹಕ್ಕೆ ಉತ್ತಮ ಪೋಷಕಾಂಶಗಳು ದೊರೆಯಯುತ್ತದೆ. ಆದರೆ ಆದ್ರೆ ಎಲ್ಲ ದಿನ ಎಲ್ಲ ಧಾನ್ಯಗಳ ಸೇವನೆ ಒಳ್ಳೆಯದಲ್ಲ. ಶಾಸ್ತ್ರಗಳ ಪ್ರಕಾರ ಗ್ರಹಗಳಿಗೆ ತಕ್ಕಂತೆ ಬೇಳೆ-ಕಾಳುಗಳನ್ನು ಸೇವನೆ ಮಾಡಿದರೆ ಉತ್ತಮ ಎನ್ನುತ್ತಾರೆ ಪಂಡಿತರು.


ಸೋಮವಾರ ತೊಗರಿ ಬೇಳೆ ಅಥವಾ ಉದ್ದಿನ ಬೇಳೆ ಸೇವನೆ ಮಾಡುವುದರಿಂದ ಆರೋಗ್ಯವಂತ ವ್ಯಕ್ತಿಯಾಗಬಹುದು. ಸರ್ವ ರೋಗಗಳಿಗೂ ಈ ಬೇಳೆ ಮದ್ದು.

ಮಂಗಳವಾರ ಮಸೂರ್ ದಾಲ್ ಉಪಯೋಗ ಮಾಡಬೇಕು. ಇದು ಸಕಾರಾತ್ಮಕ ಪ್ರಭಾವ ಬೀರುತ್ತದೆ.

ಬುಧವಾರ ಹೆಸರು ಬೇಳೆ ಅದ್ರಲ್ಲೂ ವಿಶೇಷವಾಗಿ ಸಿಪ್ಪೆ ಇರುವ ಹೆಸರು ಬೇಳೆ ಸೇವನೆ ಮಾಡಬೇಕು.

ಗುರುವಾರ ಕಡಲೆ ಬೇಳೆ ಸೇವನೆ ಮಾಡುವುದು ಒಳಿತು.

ಶುಕ್ರವಾರ ಹೆಸರು ಬೇಳೆ ತಿನ್ನುವುದು ಒಳ್ಳೆಯದು ಎನ್ನುತ್ತದೆ ಶಾಸ್ತ್ರ. ಆದ್ರೆ ತೊಗರಿ ಬೇಳೆಯನ್ನು ಸೇವಿಸಬಾರದು.

ಶನಿವಾರ ಕಪ್ಪು ಮಸೂರ್ ದಾಲ್ ಮತ್ತು ಅವರೆಕಾಳು ಸೇವನೆ ಮಾಡಬೇಕು.

ಭಾನುವಾರ ತೊಗರಿಬೇಳೆ ಹಾಗೂ ಹೆಸರು ಬೇಳೆ ಸೇವನೆ ಮಾಡುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ. ಈ ದಿನ ಮಸೂರ್ ದಾಲ್, ಶುಂಠಿಯನ್ನು ತ್ಯಜಿಸಬೇಕೆಂದು ಜ್ಯೋತಿಷ್ಯ ಹೇಳಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ