ದೀರ್ಘಾಯುಷ್ಯ ಬೇಕಾದರೆ ಧಾರ್ಮಿಕವಾಗಿ ಹೀಗಿರಬೇಕು!

ಸೋಮವಾರ, 4 ಫೆಬ್ರವರಿ 2019 (08:52 IST)
ಬೆಂಗಳೂರು: ಎಲ್ಲರಿಗೂ ದೀರ್ಘಾಯುಷ್ಯದ ಆಸೆಯಿರುತ್ತದೆ. ಆರೋಗ್ಯವಾಗಿ ಬಹುಕಾಲ ಬದುಕಿರಬೇಕು ಎಂಬುದು ಎಲ್ಲರ ಕನಸು. ಆದರೆ ಅದಕ್ಕೆ ನಾವು ಮಾಡುವ ಸನ್ಮಾರ್ಗವೂ ಕಾರಣವಾಗುತ್ತದೆ.


ನಾವು ಹೇಗೆ ಬದುಕುತ್ತೇವೆ ಎನ್ನುವುದರ ಮೇಲೆ ನಮ್ಮ ಆಯುಷ್ಯ ಅಡಗಿದೆ. ಮನುಷ್ಯ ಯಾವ ಮಾರ್ಗದಲ್ಲಿ ನಡೆಯಬೇಕೆಂದು ವೇದ ಪುರಾಣಗಳಲ್ಲಿ ಹೇಳಿದೆ.

‘ಕುರ್ವನ್ನೇವೇಹಂ ಕರ್ಮಾಣಿ ಜಿಜೀವಿಷೇಚ್ಛತ ಸಮಾ’. ಅಂದರೆ ಸತ್ಕರ್ಮಗಳನ್ನು ಮಾಡುತ್ತಲೇ ಮನುಷ್ಯ ನೂರು ವರ್ಷ ಬದುಕಬೇಕು. ಸತ್ಕರ್ಮದಿಂದಲೇ ದೀರ್ಘಾಯುಷ್ಯ. ಮನುಷ್ಯ ಬಹಳ ವರ್ಷಗಳ ಕಾಲ ಬದುಕಬೇಕೆಂದರೆ ಸತ್ಕರ್ಮಗಳ ಫಲದಿಂದ ಮಾತ್ರ. ದುರಾಚಾರಿ, ಭ್ರಷ್ಟಾಚಾರಿ, ಪಾತಕಿಗಳೂ ಹಲವು ವರ್ಷ ಬದುಕಬಹುದು. ಆದರೆ ಅವರ ಜನ್ಮಕ್ಕೆ ಯಾವುದೇ ಫಲವಿಲ್ಲ. ಇಂತಹವರು ಮತ್ತೆ ಮತ್ತೆ ನೀಚ ಜನ್ಮವೆತ್ತಿ ಜನನ-ಮರಣಗಳ ಚಕ್ರದಲ್ಲಿ ಜರ್ಜರಿತರಾಗುತ್ತಿರುತ್ತಾರೆ. ಹೀಗಾಗಿ ಎಷ್ಟೇ ಅಡೆತಡೆಗಳು ಬಂದರೂ ಸತ್ಕರ್ಮದಲ್ಲಿ ನಡೆಯುವುದು ಉತ್ತಮ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ