ಲಕ್ಷ್ಮೀ ದೇವಿಯನ್ನು ಸಂತೃಪ್ತಗೊಳಿಸುವುದು ಹೇಗೆ?

ಭಾನುವಾರ, 11 ಆಗಸ್ಟ್ 2019 (08:38 IST)
ಬೆಂಗಳೂರು: ಪ್ರತಿಯೊಬ್ಬರೂ ಮನೆಯಲ್ಲಿ ಲಕ್ಷ್ಮೀ ದೇವಿಯ ಕೃಪಾಕಟಾಕ್ಷವಿರಬೇಕೆಂದು ಬಯಸುತ್ತಾರೆ.  ಆದರೆ ಲಕ್ಷ್ಮೀ ದೇವಿಯನ್ನು ಒಂದು ದಿನ ಮಾತ್ರ ಪೂಜಿಸುವುದರಿಂದ ಆಕೆ ಪ್ರಸನ್ನವಾಗಲ್ಲ.


ಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾಗಬೇಕಾದರೆ ನಾವು ದಿನನಿತ್ಯ ಕೆಲವೊಂದು ಆಚರಣೆ ಮಾಡಬೇಕು. ಪ್ರತಿದಿನ ಸೂರ್ಯ ಹುಟ್ಟುವ ಮೊದಲೇ ಏಳುವುದು, ಮನೆ ಮುಂದೆ ಶುದ್ಧೀಕರಿಸಿ, ರಂಗೋಲಿ ಹಾಕುವುದು ಮಾಡಬೇಕು.

ಪೂಜೆ ಮಾಡುವ ಮೊದಲು, ಊಟ ತಿಂಡಿ ತಯಾರಿಸುವ ಮೊದಲು ಮಹಿಳೆಯರು ತಲೆ ಸ್ನಾನ ಮಾಡಿ ಪರಿಶುದ್ಧವಾಗಬೇಕು. ಮುಖ್ಯವಾಗಿ ಮನೆಯಲ್ಲಿ ಹೆಣ್ಣು ಮಕ್ಕಳಿಗೆ ನೋಯಿಸುವ ಕೆಲಸವನ್ನು ಯಾವತ್ತೂ ಮಾಡಬಾರದು. ಮನೆಯನ್ನು ಆದಷ್ಟು ಶುಚಿಯಾಗಿಟ್ಟುಕೊಳ್ಳಬೇಕು. ಸಂಜೆ ಮತ್ತು ಬೆಳಿಗ್ಗಿನ ಹೊತ್ತು ದೀಪ ಹಚ್ಚುವ ಸಂಪ್ರದಾಯವಿಟ್ಟುಕೊಳ್ಳಬೇಕು. ಹಾಗೂ ಹಣವನ್ನು ಎಲ್ಲೆಂದರಲ್ಲಿ ಬಿಸಾಡುವುದು, ಅಸಡ್ಡೆಯಿಂದ ನೀಡುವುದು ಮಾಡಬಾರದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ