ಕಛೇರಿ

ಮಂಗಳವಾರ, 18 ಫೆಬ್ರವರಿ 2014 (09:29 IST)
PR
1. ಕಛೇರಿಯ ಮೇಲಾಧಿಕಾರಿಯ ಪೀಠವು ನೈಋತ್ಯ ದಿಕ್ಕಿನಲ್ಲಿರಿಸಿ,ಮತ್ತು ಕುಳಿತುಕೊಳ್ಳುವಾಗ ಪೂರ್ವ ಅಥವಾ ಉತ್ತರಕ್ಕೆ ಮುಖಮಾಡಿ ಕುಳಿತುಕೊಳ್ಳಬೇಕು.

2.ಕಂಪ್ಯೂಟರ್ ಕೊಠಡಿಯು ಆಗ್ನೇಯ ದಿಕ್ಕಿಗೆ ಇದ್ದರೆ ಉತ್ತಮ.

3.ಮಾರ್ಕೆಟಿಂಗ್ ವಿಭಾಗವು ವಾಯುವ್ಯ ದಿಕ್ಕಿನಲ್ಲಿರುವ ಕೊಠಡಿಯಲ್ಲಿ ಕಾರ್ಯಾಚರಿಸಿದರೆ ಉತ್ತಮ.
4.ಖಜಾಂಚಿಯ ಪೀಠವು ಉತ್ತರ ದಿಕ್ಕಿನಲ್ಲಿರಲಿ.

5.ಸ್ವಾಗತ ಕೋಣೆಯು ಈಶಾನ್ಯ ಭಾಗದಲ್ಲಿರಬೇಕು.

6.ದೂರವಾಣಿ,ಪಕ್ಕದಲ್ಲಿರಿಸುವಂತಹ ಚಿಕ್ಕ ಮೇಜುಗಳನ್ನು ನೈಋತ್ಯ ಭಾಗದಲ್ಲಿರಿಸಬೇಕು.

7.ಮುಂಬಾಗಿಲು ತೆರೆಯುವಾಗ ಯಾವುದೇ ಅಡಚಣೆಗಳು ಇರದಂತೆ ನೋಡಿಕೊಳ್ಳಬೇಕು.

8.ವಹಿವಾಟಿಗೆ ಸಂಬಂಧಿತ ವಿಭಾಗಗಳ ಕೊಠಡಿಯು ದಕ್ಷಿಣ ಅಥವಾ ಪಶ್ಚಿಮ ಭಾಗದಲ್ಲಿದ್ದರೆ ಉತ್ತಮ.

9.ಭೋಜನಗಳನ್ನಿಡುವ ಕಪಾಟನ್ನು ಆಗ್ನೇಯ ಅಥವಾ ವಾಯುವ್ಯ ದಿಕ್ಕಿನಲ್ಲಿರಿಸಬೇಕು.

10.ಲೆಕ್ಕಪತ್ರಗಳನ್ನೊಳಗೊಂಡಿರುವ ಕಡತಗಳನ್ನು ಆಗ್ನೇಯ ಮೂಲೆಯಲ್ಲಿಯೂ, ವೈಯಕ್ತಿಕ ಕಡತಗಳನ್ನು ನೈಋತ್ಯ ಮೂಲೆಯಲ್ಲಿರಿಸಬೇಕು.

ವೆಬ್ದುನಿಯಾವನ್ನು ಓದಿ