ಬಾಲಿವುಡ್ ಹಾಟ್ ಹಾಟ್ ನಟಿ ಶಿಲ್ಪಾಶೆಟ್ಟಿ ಮನೆಗೆ ಕಳ್ಳರ ಕನ್ನ

ಸೋಮವಾರ, 31 ಮಾರ್ಚ್ 2014 (17:39 IST)
ಬಾಲಿವುಡ್ ಮಾದಕ ಹಾಟ್ ನಟಿ ಶಿಲ್ಪಾ ಶೆಟ್ಟಿ ಮತ್ತು ಪತಿ ರಾಜ್ ಕುಂದ್ರಾ ವಾಸವಾಗಿರುವ ಜುಹು ನಿವಾಸದಲ್ಲಿ ಕಳ್ಳರು ಕನ್ನ ಹಾಕಿ ಭಾರಿ ಬೆಲೆ ಬಾಳುವ ಮನ್ಯೂಸಿಕ್ ಸಿಸ್ಟಮ್ ಮತ್ತು ಐಪೋಡ್ ಕದ್ದು ಪರಾರಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅಪಾರ್ಟ್‌ಮೆಂಟ್‌ನ ಮ್ಯಾನೇಜರ್ ವಿರುದ್ಧ ಪ್ರಕರಾಣ ದಾಖಲಿಸಲಾಗಿದ್ದು, ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಆದರೆ, ತನಿಖೆಯನ್ನು ಮುಂದುವರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಏತನ್ಮಧ್ಯೆ ದಂಪತಿಗಳು ತಮ್ಮ ಹೊಸ ಪ್ರೊಜೆಕ್ಟ್‌ನಲ್ಲಿ ಬಿಜಿಯಾಗಿದ್ದಾರೆ. ಸ್ವಂತ ಬ್ಯಾನರ್ ನಿರ್ಮಾಣದಲ್ಲಿ ದಿಶಿಕಿಯಾನ್ ಚಿತ್ರ ನಿರ್ಮಾಣದಲ್ಲಿ ತೊಡಗಿದ್ದಾರೆ.

ಹರ್ಮಾನ್ ಬವೆಜಾ ಮತ್ತು ಸನ್ನಿ ಡಿಯೋಲ್ ಚಿತ್ರದಲ್ಲಿ ನಟಿಸಿದ್ದು, ಆಯೇಷಾ ಖನ್ನಾ ಚಿತ್ರರಂಗಕ್ಕೆ ಹೊಸತಾಗಿ ಪಾದಾರ್ಪಣೆ ಮಾಡಲಿದ್ದಾರೆ ನಿರ್ಮಾಪಕಿ ಶಿಲ್ಪಾಶೆಟ್ಟಿ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ