ಮುಂಬೈ: ಬಾಲಿವುಡ್ ಚಿತ್ರನಟ ನರಹತ್ಯೆಯ ಆರೋಪಗಳನ್ನು ಎದುರಿಸುತ್ತಿದ್ದು, ದಶಕದಷ್ಟು ಹಳೆಯದಾದ ಹೊಡೆದೋಡಿದ(ಹಿಟ್ ಅಂಡ್ ರನ್) ಪ್ರಕರಣದಲ್ಲಿ ಆರೋಪಗಳನ್ನು ರೂಪಿಸುವುದಕ್ಕಾಗಿ ಬುಧವಾರ ಮುಂಬೈ ಕೋರ್ಟ್‌ಗೆ ಹಾಜರಾಗಲಿದ್ದಾರೆ. ನರಹತ್ಯೆ ವಿರುದ್ಧ ನಟನ ಕೋರಿಕೆಯನ್ನು ಮುಂಬೈ ಸೆಷನ್ಸ್ ಕೋರ್ಟ್ ನಿರಾಕರಿಸಿದ್ದು, ಬುಧವಾರ ಆರೋಪಗಳನ್ನು ರೂಪಿಸಲಿದೆ.
ಸಲ್ಮಾನ್ ತಪ್ಪಿತಸ್ಥರೆಂದು ಸಾಬೀತಾದರೆ, 10 ವರ್ಷಗಳ ಕಾಲದ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಇದಕ್ಕೆ ಮುಂಚೆ ಸಲ್ಮಾನ್ ವಿರುದ್ಧ ಅಡ್ಡಾದಿಡ್ಡಿ ಮತ್ತು ನಿರ್ಲಕ್ಷ್ಯದ ಚಾಲನೆ ಮೂಲಕ ಸಾವನ್ನುಂಟು ಮಾಡಿದ್ದರಿಂದ ಕಡಿಮೆ ಪ್ರಮಾಣದ ಅಪರಾಧವನ್ನು ಹೇರಲಾಗಿತ್ತು. ಇದಕ್ಕೆ ಗರಿಷ್ಠ 2 ವರ್ಷಗಳ ಜೈಲು ಶಿಕ್ಷೆ ನೀಡಲಾಗುತ್ತದೆ. ಆದರೆ ಮ್ಯಾಜಿಸ್ಟ್ರೇಟ್ ಕೋರ್ಟ್ ಅದನ್ನು ವೃದ್ಧಿಸಿ ಗಂಭೀರ ನರಹತ್ಯೆ ಆರೋಪವನ್ನು ಜೂನ್‌ನಲ್ಲಿ ಮಾಡಿತ್ತು.
2002ರ ಸೆಪ್ಟೆಂಬರ್‌ನಲ್ಲಿ 11 ವರ್ಷಗಳ ಹಿಂದೆ, ಖಾನ್ ಟೊಯೋಟೋ ಲ್ಯಾಂಡ್ ಕ್ರೂಸರ್ ಚಾಲನೆ ಮಾಡುವಾಗ ಬಾಂದ್ರಾದ ಬೇಕರಿಯ ಹೊರಗೆ ಪಾದಚಾರಿ ಮಾರ್ಗದಲ್ಲಿ ನಿದ್ರೆಯಲ್ಲಿದ್ದ ಜನರ ಮೇಲೆ ಕಾರನ್ನು ಹರಿಸಿದ್ದರಿಂದ ಒಬ್ಬ ವ್ಯಕ್ತಿ ಮತಪಟ್ಟು, ಇನ್ನೂ ನಾಲ್ವರು ಗಾಯಗೊಂಡಿದ್ದರು. 1988ರಲ್ಲಿ ಕೂಡ ನಟ ಸಂರಕ್ಷಿತ ಬ್ಲಾಕ್ ಬಕ್ ಜಿಂಕೆಯನ್ನು ರಾಜಸ್ತಾನದಲ್ಲಿ ಕೊಂಡ ಆರೋಪದ ಮೇಲೆ 3 ದಿನಗಳ ಸೆರೆವಾಸಕ್ಕೆ ಒಳಪಟ್ಟಿದ್ದರು.