ಅಮೀರ್ ಖಾನ್ ನಟನೆ ಯೊಂದೆ ಧೂಮ3 ಆಕರ್ಷಣೆ

ಭಾನುವಾರ, 22 ಡಿಸೆಂಬರ್ 2013 (14:37 IST)
PR
ಚಿಕಾಗೊ ದಲ್ಲಿ ಗ್ರೇಟ್ ಇಂಡಿಯನ್ ಸರ್ಕಸ್ ಯಜಮಾನ ಇಕ್ಬಾಲ್ ಹರೂನ್ ಖಾನ್(ಜಾಕಿ ಶ್ರಾಫ್). ಆತನ ಮಗ ಸಾಹಿರ್ ಖಾನ್ . ಸರ್ಕಸ್ ನಡೆಸಲು ಇಕ್ಬಾಲ್ ಸಾಲ ಮಾಡಿ ಅದನ್ನು ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಅದನ್ನು ಕಂಡ ಸಾಹೀರ್ (ಅಮೀರ್ ಖಾನ್) ಈ ಬ್ಯಾಂಕ್ ಮೇಲೆ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಆ ಬ್ಯಾಂಕ್ ನಲ್ಲಿ ಕಳ್ಳತನ ಮಾಡುತ್ತಾನೆ. ಅಲ್ಲಿ ಒಂದು ಗುರುತು ಇಟ್ಟು ಹೊರಡುತ್ತಾನೆ.

ಈ ಕೇಸ್ ಗಾಗಿ ಚಿಕಾಗೊ ಪೊಲೀಸ್ ಡಿಪಾರ್ಟ್ ಮೆಂಟ್ ಭಾರತದಿಂದ ಜೈ(ಅಭಿಷೇಕ್ ಬಚ್ಚನ್) ಮತ್ತು ಅಲಿ (ಉದಯ್ ಚೋಪ್ರಾ ) ರನ್ನು ಕರೆಸಿಕೊಳ್ಳುತ್ತಾರೆ. ಇಲ್ಲಿಗೆ ಬಂದ ಜೈ ಸಾಹಿರ್ ಹಿಡಿಯುವ ಯೋಜನೆ ರೂಪಿಸುತ್ತಾನೆ.

ಹೇಗಾದರೂ ಮಾಡಿ ಈ ರಹಸ್ಯ ಭೇದಿಸ ಬೇಕೆಂದು ಜೈ ಪ್ರಯತ್ನ ಮಾಡುತ್ತಾನೆ. ಅದೇ ಸಮಯದಲ್ಲಿ ಸಾಹಿರ್ ಸಹ ತನ್ನ ತಂದೆಯ ಮರಣಕ್ಕೆ ಕಾರವಾದ ಈ ಬ್ಯಾಂಕ್ ನ್ನು ಅಂತಿಮವಾಗಿ ದೋಚಿ ಅದನ್ನು ಮುಚ್ಚುವಂತೆ ಮಾಡ ಬೇಕು ಎಂದು ನಿರ್ಧರಿಸಿ ಬ್ಯಾಂಕ್ ರಾಬರಿಗೆ ಸಿದ್ಧವಾಗುತ್ತಾನೆ. ಅಂತಿಮವಾಗಿ ಏನಾಯಿತು ಎಂದು ತಿಳಿಯ ಬೇಕಾದರೆ ಚಿತ್ರ ನೋಡಲೇ ಬೇಕು.

ಧೂಮ್3 ಚಿತ್ರದ ಮುಖ್ಯ ಆಕರ್ಷಣೆ ಅಮೀರ್ ಖಾನ್. ಆತನ ನಟನೆಯ ಪ್ರಭಾವ ಇಡೀ ಚಿತ್ರವನ್ನು ಆವರಿಸಿದೆ ಎಂದರೆ ಆ ನಟನೆಯ ಶಕ್ತಿ ಎಂತಹ ದ್ದಿರಬಹುದು ಎಂಬುದನ್ನು ಊಹಿಸಿಕೊಳ್ಳಿ. ಜೈ ಪಾತ್ರದಲ್ಲಿ ಇರುವ ಅಭಿಷೇಕ್ ಬಚ್ಚನ್ ಕಳೆದ ಚಿತ್ರಗಳಿಗಿಂತ ಡಲ್ ಆಗಿ ಮಾಡಿದ್ದಾರೆ. ಇನ್ನು ಪಾತ್ರಕ್ಕೂ ಹೇಳಿಕೊಲ್ಲ್ಳುವ ಕೆಲಸ ಇಲ್ಲ. ಕತ್ರಿನಾ ಕೈಫ್ ಪಾತ್ರವು ಹೀರೋಗೆ ಒಬ್ಬಳು ಹೀರೋಯಿನ್ ಅನ್ನುವಷ್ಟಿದೆ.
ವಿಜಯ್ ಕೃಷ್ಣ ಆಚಾರ್ಯ ನಿರ್ದೇಶನದ ಧೂಮ್ 3 ನಲ್ಲಿ ಮೊದಲಾರ್ಧ ಅಂತಹ ಆಸಕ್ತಿ ಹುಟ್ಟಿಸುವುದಿಲ್ಲ . ಬಳಿಕ ಅಮೀರ್ ಖಾನ್ ನಟನೆಯಿಂದ ಚಿತ್ರದ ಆಕರ್ಷಣೆ ಹೆಚ್ಚಾಗುತ್ತದೆ. ಮುಖ್ಯವಾಗಿ ಪ್ರೇಕ್ಷಕರಿಗೆ ಅತಿ ಆಕರ್ಷಣೆ ಹುಟ್ಟಿಸುವಂತಹ ಯಾವುದೇ ಥ್ರಿಲ್ ಹೆಚ್ಚಾಗಿಲ್ಲ ಚಿತ್ರದಲ್ಲಿ! ಛಾಯಾಗ್ರಹಣ ಈ ಚಿತ್ರದ ಮುಖ್ಯ ಆಕರ್ಷಣೆ ಆಗಿದೆ. ಸುದೀಪ್ ಚಟರ್ಜಿ ಕೆಲಸ ಇಲ್ಲಿ ಅತ್ಯುತ್ತಮವಾಗಿ ಆಗಿದೆ. ಸಂಗೀತ ಪ್ರೀತಮ್ ದು ಧುಂ ಮಸಾಲೆಯನ್ನು ಪದೇಪದೇ ಚಿತ್ರದಲ್ಲಿ ಬೆರಸಿ ಆ ಮೂಲಕ ಚಿತ್ರ ಗೆಲ್ಲಿಸುವ ಪ್ರಸ್ಯತ್ನ ಮಾಡಿದ್ದಾರೆ ಸಂಗೀತ ನಿರ್ದೇಶಕರು.

ಇದರಲ್ಲಿ ಮುಖ್ಯವಾಗಿ ಅಮೀರ್ ಖಾನ್ ನಟನೆ ಮಾತ್ರ ಹೆಚ್ಚು ಆಸಕ್ತಿ ನೀಡುವ ಸಂಗತಿ, ಪ್ರೇಕ್ಷಕರು ನಿರೀಕ್ಷಿಸಿದಂತಹ ಆಕ್ಷನ್ ಚಿತ್ರದಲ್ಲಿ ಇಲ್ಲ. ದಿ ಪ್ರೆಸ್ತಿಜ್ ಅನ್ನುವ ಬಾಲಿವುಡ್ ಚಿತ್ರದ ಹೋಲಿಕೆ ಈ ಚಿತ್ರದಲ್ಲಿ ಹೇರಳ ವಾಗಿದೆ. ಒಟ್ಟಾರೆ ಧೂಮ್ ಸೀರಿಸ್ ಅಂತ ಜನರು ಈ ಚಿತ್ರವನ್ನು ಆಹ್ಲಾದಿಸ ಬಹುದು .
ತುಂಬಾ ನಿರೀಕ್ಷೆಗಳಿಂದ ಹೋದರೆ ಪ್ರೇಕ್ಷಕ ನಿರಾಸೆ ಆಗುವುದು ಖಂಡಿತ

ವೆಬ್ದುನಿಯಾವನ್ನು ಓದಿ