'ವಿಷ್ಣುವರ್ಧನ' ಹಿಂದಿಯ ರಿಮೇಕ್ ಅಂತೆ, ಹೌದೇ?

SUJENDRA
ಸಾಧ್ಯವಿರುವ ಅಷ್ಟೂ ಗಿಮಿಕ್‌ಗಳನ್ನು, ವಿವಾದಗಳನ್ನು ಸೃಷ್ಟಿಸಿ ಇನ್ನೇನು ಬಿಡುಗಡೆಯಾಗಲಿರುವ 'ಓನ್ಲಿ ವಿಷ್ಣುವರ್ಧನ' ಚಿತ್ರ ಬಾಲಿವುಡ್‌ನಲ್ಲಿ ದಶಕಗಳ ಹಿಂದೆ ಬಂದಿರುವ ಸಿನಿಮಾವೊಂದರ ಪಡಿಯಚ್ಚೇ? ಹಾಗೆನ್ನುವ ವದಂತಿಯ ರೂಪದ ಸ್ಫೋಟಕ ಮಾಹಿತಿಯೊಂದು ಗಾಂಧಿನಗರದ ಗಲ್ಲಿಗಲ್ಲಿಗಳಲ್ಲಿ ಜೋರಾಗಿಯೇ ಸದ್ದು ಮಾಡುತ್ತಿದೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ ಹೆಸರಿನ ಲಾಭ ಪಡೆದುಕೊಂಡು ಬಿಡುಗಡೆಯಾಗುತ್ತಿದೆ ಎಂದು ಹೇಳಲಾಗುತ್ತಿರುವ 'ಓನ್ಲಿ ವಿಷ್ಣುವರ್ಧನ' ಚಿತ್ರ ದ್ವಾರಕೀಶ್ ಕನಸು. ನಾನು ಭಾರತಿಯ ಗಂಡ ವಿಷ್ಣುವರ್ಧನ್ ಹೆಸರಿನಲ್ಲಿ ಚಿತ್ರ ನಿರ್ಮಿಸುತ್ತಿಲ್ಲ, ಕರ್ನಾಟಕದಲ್ಲಿ ಹತ್ತಾರು ವಿಷ್ಣುವರ್ಧನ್‌ಗಳಿದ್ದಾರೆ, ಇದು ಅವರ ಹೆಸರಾಗಿರಬಹುದು ಅಂತ ವಾದಿಸುತ್ತಾ ಚಿತ್ರ ನಿರ್ಮಾಣ ಮುಂದುವರಿಸಿದ್ದ ದ್ವಾರಕೀಶ್‌ಗೆ ಆಗ ಬೆನ್ನಾಗಿ ನಿಂತದ್ದು ಕಿಚ್ಚ ಸುದೀಪ್.

ಇಬ್ಬರೂ ಸಾಕಷ್ಟು ಸಮಜಾಯಿಷಿಗಳನ್ನು ನೀಡಿದ್ದರು. ಈ ಚಿತ್ರದ ಪಾತ್ರಕ್ಕೆ ವಿಷ್ಣುವರ್ಧನ ಹೆಸರೇ ಬೇಕು, ಇದು ರಾಜನೊಬ್ಬನ ಕಥೆ ಎಂದೆಲ್ಲ ಹೇಳಿದ್ದರು. ಹೀಗಿದ್ದಾಗ 'ವಿಷ್ಣುವರ್ಧನ' ರಿಮೇಕ್ ಎಂಬ ಗಾಳಿಸುದ್ದಿ ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ.

ಮೂಲಗಳ ಪ್ರಕಾರ, ಇದು ಅಕ್ಷಯ್ ಕುಮಾರ್ ನಾಯಕರಾಗಿದ್ದ 'ಕಿಲಾಡಿ' ಸರಣಿಯ ದಶಕಗಳ ಹಿಂದಿನ ಚಿತ್ರವೊಂದರ ರಿಮೇಕ್. ಅದು ಯಾವ ಚಿತ್ರ ಅನ್ನೋದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ.

ಕನ್ನಡದ 'ಓನ್ಲಿ ವಿಷ್ಣುವರ್ಧನ' ಕಿಚ್ಚ ಸುದೀಪ್‌ಗೆ ಪ್ರಿಯಾಮಣಿ ಮತ್ತು ಭಾವನಾ ಮೆನನ್ ಎಂಬ ಇಬ್ಬರು ಮಲಯಾಳಿಗಳು ನಾಯಕಿಯರು. ಹರಿಕೃಷ್ಣ ಸಂಗೀತವಿರುವ ಈ ಚಿತ್ರವನ್ನು ನಿರ್ದೇಶಿಸಿರುವುದು, ಹೊಸಬ ವಿ. ಕುಮಾರ್.

ನಾಯಕ ರಾಜನಾಗಬೇಕೆಂದು ಕನಸು ಕಾಣುತ್ತಿರುವವನು. ಹೀಗಿದ್ದಾಗ ಸಿಕ್ಕಿದ ಮೊಬೈಲೊಂದು ನಾಯಕನ ಬದುಕಿನ ಪಥವನ್ನೇ ಬದಲಾಯಿಸುತ್ತದೆ. ಇದು ಎಲ್ಲಿಗೆ ಹೋಗಿ ತಲುಪುತ್ತದೆ ಅನ್ನೋದೇ ಚಿತ್ರಕಥೆ ಎಂಬ ಸುದ್ದಿಯೂ ಜೋರಾಗಿದೆ.

ಇವೆಲ್ಲ ನಿಜಕ್ಕೂ ಎಷ್ಟು ಸತ್ಯ ಅನ್ನೋದು ಗುರುವಾರ ಇಡೀ ರಾಜ್ಯದ ಜನತೆಗೆ ತಿಳಿದು ಬರಲಿದೆ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ವೆಬ್ದುನಿಯಾವನ್ನು ಓದಿ