ಅಪಘಾತ: ಬಾಂಡ್ ಹುಡುಗಿ ಪ್ರಿಯಾಮಣಿ ಎಸ್ಕೇಪ್

SUJENDRA
ನಾಯಕ ಅಥವಾ ನಾಯಕಿ ಕೊಂಚವೇ ಅಪಾಯಕಾರಿ ಸನ್ನಿವೇಶದಲ್ಲಿ ಪಾಲ್ಗೊಂಡರೂ ಅಥವಾ ಏನಾದರೂ ಸಣ್ಣಪುಟ್ಟ ಗೀರು ಗಾಯಗಳಾದರೂ ಬ್ರೇಕಿಂಗ್ ನ್ಯೂಸ್ ಮಾಡುವ ನಿರ್ಮಾಪಕ-ನಿರ್ದೇಶಕರಿಗೆ ಗಾಂಧಿನಗರದಲ್ಲಿ ಕೊರತೆಯಿಲ್ಲ. ಆದರೆ ಬಾಂಡ್ ಹುಡುಗಿ ಪ್ರಿಯಾಮಣಿ ಮಾತ್ರ ಸುದ್ದಿಯ ಗೋಜಿಗೆ ಹೋಗದೆ, ಬದುಕಿ ಬಂದಿರುವುದನ್ನಷ್ಟೇ ಖುಷಿಯಿಂದ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಆಗಿರುವುದಿಷ್ಟು: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಾಯಕರಾಗಿರುವ, ದುನಿಯಾ ಸೂರಿ ನಿರ್ದೇಶನದ 'ಅಣ್ಣಾ ಬಾಂಡ್' ಚಿತ್ರದ ಶೂಟಿಂಗ್‌ಗಾಗಿ ಚಿತ್ರತಂಡ ಬೆಂಗಳೂರಿನಿಂದ ಮುತ್ತತ್ತಿ ಕಾಡಿನತ್ತ ಹೊರಟಿತ್ತು. ಈ ದಾರಿಯಲ್ಲಿ ಸಾಗುವಾಗ ಅಪಘಾತವೊಂದು ನಡೆದಿದೆ.

ಪ್ರಿಯಾಮಣಿ ಸೇರಿದಂತೆ ಡ್ರೈವಿಂಗ್ ಮಾಡುತ್ತಿದ್ದವರು ಮತ್ತು ಚಿತ್ರತಂಡ ಇದರಿಂದ ಸ್ವಲ್ಪದರಲ್ಲೇ ಎಸ್ಕೇಪ್ ಆಗಿತ್ತು. ಕಾರಿನ ಆಚೀಚೆ ಬದಿಗಳು ಮಾತ್ರ ಹಾನಿಗೊಂಡಿದ್ದವು. ಥಾಂಕ್ ಗಾಡ್, ಹೋದ ಜೀವ ಬಂದಂತಾಯಿತು ಎಂದಿದ್ದಾರೆ ಮಲಯಾಳಿ ಹುಡುಗಿ.

'ಜಾಕಿ' ಜಯಭೇರಿಯ ನಂತರ ಪುನೀತ್-ಸೂರಿ ಕಾಂಬಿನೇಷನ್ ಪುನರಾವರ್ತನೆಯಾಗುತ್ತಿರುವ ಚಿತ್ರವಿದು. ಇದೇ ಕಾರಣದಿಂದ ನಿರೀಕ್ಷೆಯೂ ಜೋರಾಗಿದೆ. ಪುನೀತ್ ಸಿಕ್ಸ್ ಪ್ಯಾಕ್ ಪ್ರದರ್ಶನ ಮಾಡಲಿರುವ ಚಿತ್ರದಲ್ಲಿ ನಿಧಿ ಸುಬ್ಬಯ್ಯ ಕೂಡ ನಾಯಕಿ.

ಈ ನಡುವೆ ಪ್ರಿಯಾಮಣಿ ನಾಯಕಿಯಾಗಿರುವ ಸುದೀಪ್ 'ವಿಷ್ಣುವರ್ಧನ' ಚಿತ್ರ ಇದೇ ಗುರುವಾರ ಬಿಡುಗಡೆಯಾಗುತ್ತಿದೆ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ವೆಬ್ದುನಿಯಾವನ್ನು ಓದಿ