ಸ್ಯಾಂಡಲ್‌ವುಡ್ ಮುಂದಾಳತ್ವಕ್ಕೆ ಅಂಬರೀಷ್ ಗುಡ್ ಬೈ

SUJENDRA
ವಯಸ್ಸು ಹೆಚ್ಚಾಗುತ್ತಿರುವ ಕಾರಣದಿಂದ, ಕನ್ನಡ ಚಲನಚಿತ್ರ ಕಲಾವಿದರ ಸಂಘವನ್ನೇ ಸರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಕನ್ನಡ ಚಿತ್ರರಂಗದ ಮುಂದಾಳತ್ವ ವಹಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ ರೆಬೆಲ್ ಸ್ಟಾರ್ ಅಂಬರೀಷ್.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರ ನಂತರ ಕನ್ನಡ ಚಿತ್ರರಂಗ ಉತ್ತಮ ಮುಂದಾಳತ್ವವಿಲ್ಲದೆ ಸೊರಗುತ್ತಿದೆ. ಈ ನಿಟ್ಟಿನಲ್ಲಿ ನೀವ್ಯಾಕೆ ಜವಾಬ್ದಾರಿ ವಹಿಸಿಕೊಳ್ಳಬಾರದು ಎಂದು ಸಭಿಕರು ಕೇಳಿದ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿದ್ದಾರೆ.

ಡಾ.ರಾಜ್ ನಂತರ ಕನ್ನಡ ಚಿತ್ರರಂಗಕ್ಕೆ ಉತ್ತಮ ನಾಯಕತ್ವವಿಲ್ಲ ಎಂದು ಮೇಲ್ನೋಟಕ್ಕೆ ಹೇಳಬಹುದಾದರೂ, ಸ್ಯಾಂಡಲ್‌ವುಡ್‌ನ ರಂಪಾಟಗಳು ಬೀದಿಗಿಳಿದು ಮೂರಾಬಟ್ಟೆಯಾಗುವ ಮೊದಲು ಸ್ವತಃ ಅಂಬರೀಷ್ ಮುಂದೆ ನಿಂತು ಎಲ್ಲರನ್ನೂ ಸಮಾಧಾನ ಮಾಡಿದ ಉದಾಹರಣೆಗಳು ಸಾಕಷ್ಟಿವೆ.

ಸ್ಯಾಂಡಲ್‌ವುಡ್‌ನಲ್ಲಿ ಕಲಹಗಳು ಹೊಸದಲ್ಲ. ಸಿನಿಮಾ ರಂಗದಲ್ಲಿ ಸಾಕಷ್ಟು ಹಣಕಾಸು ಮತ್ತು ಪ್ರತಿಷ್ಠೆ ವಿಷಯಗಳು ಹರಿದಾಡುವುದರಿಂದ ಒಂದಲ್ಲಾ ಒಂದು ರೀತಿಯಲ್ಲಿ ಕಲಾವಿದರು ಮುನಿಸಿಕೊಳ್ಳುವುದು ಮಾಮೂಲಿ. ಆದರೆ ಅವುಗಳನ್ನೆಲ್ಲಾ ಯಾರಿಗೂ ಭಿನ್ನಾಭಿಪ್ರಾಯವಾಗದ ರೀತಿಯಲ್ಲಿ ರಾಜಿ ಮಾಡಿ ಕಲಿಸುವ ಮೂಲಕ ರೆಬೆಲ್ ಸ್ಟಾರ್ ಅಂಬರೀಷ್ ಇದುವರೆಗೂ ಸ್ಯಾಂಡಲ್‌ವುಡ್‌ಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎನ್ನುತ್ತಿದೆ ಗಾಂಧಿನಗರ.

ಆದರೆ ಇನ್ನು ಮುಂದೆ ಸ್ಯಾಂಡಲ್‌ವುಡ್‌ನಲ್ಲಿ ಎಲ್ಲರೂ ಒಗ್ಗಟ್ಟಾಗಿ ಇರುತ್ತಾರಾ ಅಥವಾ ಒಂದೇ ಕುಟುಂಬದಂತೆ ಇದ್ದೇವೆ ಎಂದು ಹೇಳಿ, ಹೇಳೊರಿಲ್ಲ ಕೇಳೋರಿಲ್ಲ ನಂಗೆ ನಾನೇ ರಾಜನು ಎಂದು ಬೇರೆ ಬೇರೆಯಾಗುತ್ತಾರೊ ಕಾದುನೋಡಬೇಕಿದೆ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ವೆಬ್ದುನಿಯಾವನ್ನು ಓದಿ