ಧರ್ಮವನ್ನು ಅವಹೇಳನ ಮಾಡ್ತೀರಾ; ಉಪೇಂದ್ರನಿಗೆ ಘೇರಾವ್

SUJENDRA
ಕಠಾರಿ ವೀರ ಸುರಸುಂದರಾಂಗಿ ಚಿತ್ರದಲ್ಲಿ ಹಿಂದೂ ಧರ್ಮಕ್ಕೆ ಅವಹೇಳನ ಮಾಡುವ ರೀತಿಯಲ್ಲಿ ದೃಶ್ಯಗಳನ್ನು ಬಿಂಬಿಸಲಾಗಿದೆ. ಈ ಮೂಲಕ ಬಹುಸಂಖ್ಯಾತ ಜನರು ನಂಬಿರುವಂತಾ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡುವ ಕಾರ್ಯಗಳು ನಡೆಯುತ್ತಿದೆ ಎಂದು ಆರೋಪಿಸಿರುವ ಬಜರಂಗ ದಳ ಕಾರ್ಯಕರ್ತರು, ಸಕಲೇಶಪುರಕ್ಕೆ ಆಗಮಿಸಿದ್ದ ನಟ ಉಪೇಂದ್ರ ಅವರಿಗೆ ಘೇರಾವ್ ಹಾಕಿದ್ದಾರೆ.

ತಮಗರಿವಿದ್ದಂತೆ, ಕಠಾರಿ ವೀರ ಸುರಸುಂದರಾಂಗಿ ಚಿತ್ರದಲ್ಲಿ ಧಾರ್ಮಿಕ ಭಾವನೆಗಳಿಗೆ ಯಾವುದೇ ರೀತಿಯ ದಕ್ಕೆಯನ್ನುಂಟು ಮಾಡುವ ದೃಶ್ಯಗಳಿಲ್ಲ. ಹಾಗೊಂದು ವೇಳೆ ಅಂತಹಾ ದೃಶ್ಯಗಳೇನಾದರೂ ಇದ್ದರೆ ಈ ಸಂಬಂಧ ವಿವಿಧ ದೃಷ್ಟಿಕೋನದ ಚಿಂತಕರಿರುವ ಏಕ ವೇದಿಕೆಯಲ್ಲಿ ಚರ್ಚಿಸಿ ದೃಶ್ಯಗಳಿಗೆ ಕತ್ತರಿ ಪ್ರಯೋಗ ಮಾಡುವುದಾಗಿ ಮುನಿರತ್ನ ಅವರು ಬಜರಂಗ ದಳ ಹಾಗೂ ಶ್ರೀರಾಮ ಸೇನೆಯ ಮುಖ್ಯಸ್ಥರ ಬಳಿ ಮನವಿ ಮಾಡಿಕೊಂಡಿದ್ದರು.

ಈ ನಡುವೆ, ಈ ರೀತಿಯ ಒಪ್ಪಂದಗಳ ಕುರಿತು ಅರಿವಿಲ್ಲದ ಕಾರ್ಯಕರ್ತರು, ನೇರಾನೇರ ಘೇರಾವ್ ಹಾಕುವ ಕಾರ್ಯಕ್ಕಿಳಿಯುವ ಮೂಲಕ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಕಾರ್ಯಕರ್ತರ ವರ್ತನೆ ಕುರಿತು ಮಾಧ್ಯಮಗಳು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಪ್ರಾಂತೀಯ ವಲಯದ ಮುಖ್ಯಸ್ಥರು, ಇಂತಹಾ ಚಲನ ಚಿತ್ರಗಳನ್ನು ತೆಗೆದರೆ ಕಾರ್ಯಕರ್ತರು ತಾಳ್ಮೆಕಳೆದುಕೊಳ್ಳುವುದು ಸಾಮಾನ್ಯ ಎಂದು ಸಮರ್ಥಿಸಿಕೊಂಡಿದ್ದಾರೆ.

ಅಲ್ಲದೆ, ಇನ್ನು ಮುಂದೆಯೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಾ ಚಿತ್ರಗಳನ್ನು ತೆಗೆಯಬೇಡಿ ಎಂದು ನಿರ್ಮಾಪಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ