ರಮ್ಯಾಗೆ ಇನ್ನೊಂದು ಪ್ರಶಸ್ತಿ, ಸುದೀಪ್‌ಗೂ ಗರಿ

SUJENDRA
ಇತ್ತೀಚೆಗೆ ಬಿರುದು ಬಿನ್ನಾಣಗಳಿಂದಲೇ ಸುದ್ದಿ ಮಾಡುತ್ತಿರುವ ರಮ್ಯಾ ಮುಡಿಗೆ 'ಬೆಂಗಳೂರು ಟೈಮ್ಸ್ ಅತ್ಯುತ್ತಮ ನಟಿ' ಪ್ರಶಸ್ತಿಯ ಗರಿ ಸೇರ್ಪಡೆಯಾಗಿದೆ. ತೀರಾ ಅಪರೂಪಕ್ಕೆ ಪ್ರಶಸ್ತಿ ಪಡೆಯುವ ಕಿಚ್ಚ ಸುದೀಪ್‌ಗೂ ಹೆಮ್ಮೆ. ಅವರಿಗೆ ಶ್ರೇಷ್ಠ ನಟ ಪ್ರಶಸ್ತಿ ಒಲಿದಿದೆ.

ಇದು ಓದುಗರೇ ನಾಮಕರಣ ಮಾಡುವ ಪ್ರಶಸ್ತಿ. ತಾವು ನೋಡಿದ ಚಿತ್ರಗಳಲ್ಲಿ ಯಾರು, ಯಾವುದರಲ್ಲಿ ಬೆಸ್ಟು ಎಂಬುದನ್ನು ಆನ್‌ಲೈನ್‌ನಲ್ಲೇ ವೋಟಿಂಗ್ ಮಾಡಿ ಆಯ್ಕೆ ಮಾಡುವ ಅವಕಾಶವನ್ನು 'ಟೈಮ್ಸ್ ಆಫ್ ಇಂಡಿಯಾ' ಪತ್ರಿಕೆಯ ಬೆಂಗಳೂರು ಆವೃತ್ತಿ ಅವಕಾಶ ಮಾಡಿಕೊಟ್ಟಿತ್ತು.

ಪ್ರಶಸ್ತಿಯ ಬಹುತೇಕ ಪಾಲನ್ನು ಪಡೆದಿರುವುದು ನಾಗಶೇಖರ್ ನಿರ್ದೇಶನದ 'ಸಂಜು ವೆಡ್ಸ್ ಗೀತಾ'. ಇದರಲ್ಲಿ ಶ್ರೀನಗರ ಕಿಟ್ಟಿ ಮತ್ತು ರಮ್ಯಾ ನಾಯಕ-ನಾಯಕಿಯರಾಗಿದ್ದರು. ಉಳಿದಂತೆ ವಿಷ್ಣುವರ್ಧನ, ಕೆಂಪೇಗೌಡ, ಲೈಫು ಇಷ್ಟೇನೆ, ಒಲವೇ ಮಂದಾರ, ಸಾರಥಿ ಮುಂತಾದ ಚಿತ್ರಗಳಿಗೂ ಪ್ರಶಸ್ತಿಗಳು ಸಂದಿವೆ.

ಇಲ್ಲಿ ಲಕ್ಷಾಂತರ ಮಂದಿ ವೋಟಿಂಗ್ ಮಾಡಿದ್ದಾರೆ. ರಮ್ಯಾ, ಸುದೀಪ್ ಸೇರಿದಂತೆ ಬಹುತೇಕ ಕಲಾವಿದರು ಸ್ವತಃ ಬಂದು ಪ್ರಶಸ್ತಿ ಸ್ವೀಕರಿಸಿ, ಹೆಮ್ಮೆಯಿಂದ ಬೀಗಿದ್ದಾರೆ. ಯಾರಿಗೆ ಯಾವ ಪ್ರಶಸ್ತಿ ಸಿಕ್ಕಿದೆ ಅನ್ನೋದರ ಸಂಪೂರ್ಣ ಪಟ್ಟಿ ಇಲ್ಲಿದೆ, ಓದಿಕೊಳ್ಳಿ.
SUJENDRA

ಅತ್ಯುತ್ತಮ ನಟ: ಸುದೀಪ್ (ವಿಷ್ಣುವರ್ಧನ)
ಅತ್ಯುತ್ತಮ ನಟಿ: ರಮ್ಯಾ (ಸಂಜು ವೆಡ್ಸ್ ಗೀತಾ)
ಅತ್ಯುತ್ತಮ ಚಿತ್ರ: ಸಂಜು ವೆಡ್ಸ್ ಗೀತಾ
ಅತ್ಯುತ್ತಮ ನಿರ್ದೇಶಕ: ಪವನ್ ಕುಮಾರ್ (ಲೈಫು ಇಷ್ಟೇನೆ)
ಅತ್ಯುತ್ತಮ ಸಂಗೀತ ನಿರ್ದೇಶಕ: ಜೆಸ್ಸಿ ಗಿಫ್ಟ್ (ಸಂಜು ವೆಡ್ಸ್ ಗೀತಾ)
ಅತ್ಯುತ್ತಮ ಸಾಹಿತ್ಯ: ಕವಿರಾಜ್ (ಸಂಜು ವೆಡ್ಸ್ ಗೀತಾ ಶೀರ್ಷಿಕೆ ಗೀತೆ)
ಅತ್ಯುತ್ತಮ ಗಾಯಕ: ಸೋನು ನಿಗಮ್ (ಸಂಜು ವೆಡ್ಸ್ ಗೀತಾ ಶೀರ್ಷಿಕೆ ಗೀತೆ)
ಅತ್ಯುತ್ತಮ ಗಾಯಕಿ: ಶ್ರೇಯಾ ಘೋಷಾಲ್ (ಸಂಜು ವೆಡ್ಸ್ ಗೀತಾ)
ಭರವಸೆಯ ನವನಟ: ಶ್ರೀಕಾಂತ್ (ಒಲವೇ ಮಂದಾರ)
ಭರವಸೆಯ ನವನಟಿ: ದೀಪಾ ಸನ್ನಿಧಿ (ಸಾರಥಿ ಮತ್ತು ಪರಮಾತ್ಮ)
ಉತ್ತಮ ಯುವತುಡಿತದ ಚಿತ್ರ: ಲೈಫು ಇಷ್ಟೇನೆ
ಉತ್ತಮ ಖಳ ನಟ: ರವಿಶಂಕರ್ (ಕೆಂಪೇಗೌಡ)
ಉತ್ತಮ ಖಳ ನಟಿ: ಸಂಜನಾ (ಮತ್ತೆ ಬನ್ನಿ ಪ್ರೀತ್ಸೋಣ)
ಉತ್ತಮ ಚಿತ್ರಕಥೆ: ದಿನಕರ ತೂಗುದೀಪ (ಸಾರಥಿ)
ಉತ್ತಮ ಹಾಸ್ಯನಟ: ರಂಗಾಯಣ ರಘು (ಹುಡುಗರು)

ವೆಬ್ದುನಿಯಾವನ್ನು ಓದಿ