ಕನ್ನಡ ಚಿತ್ರರಂಗದಲ್ಲಿ ಬಾಲ ನಟನಾಗಿ ಎಂಟ್ರಿ ಆದ ಕಲಾವಿದ ವಿನಾಯಕ ಜೋಶಿ. ಆಪ್ತರ ಪಾಲಿಗೆ ಜೋ ಆಗಿರುವ ವಿನಾಯಕ ಜೋಶಿ ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲದೇ ರೇಡಿಯೋ ಜಾಕಿ ಆಗಿ ಸಹ ಗೆದ್ದ ಪ್ರತಿಭೆ. ಅವರ ರಂಗಭೂಮಿ ಪಯಣವೂ ಸಹ ಜನಪ್ರಿಯತೆಯ ನ್ನು ಹೆಚ್ಚಿಸಿತ್ತು. ಆ ಬಳಿಕ ಅವರು ಕಾಣಿಸಿಕೊಂಡಿದ್ದು ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲಿ. ಅಲ್ಲಿಂದ ಹೊರ ಬಂದ ವಿನಾಯಕ ಜೋಶಿ ಈಗ ತಮ್ಮನ್ನು ಕಂಗ್ಲೀಶ್ ಅಂದರೆ ಕನ್ನಡ ಮತ್ತು ಇಂಗ್ಲೀಶ್ ಮಿಶ್ರಣ ಒಳಗೊಂಡಿರವ ಚಿತ್ರದ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಜೋಶ್-ಈ-ಲೇ ಹೆಸರಿನ ಈ ರಿಯಾಲಿಟಿ ಶೋ ಬ್ಯಾಂಕಾಕ್ ನಲ್ಲಿ ಚಿತ್ರೀಕರಣಗೊಳ್ಳುತ್ತಿದೆ.
ಇದೊಂದು ಹೊಸ ಬಗೆಯ ಡಾಕ್ಯುಮೆಂಟರಿ ಡ್ರಾಮ ಆಗಿದ್ದು 45 ನಿಮಿಷಗಳ ಕಾಲ ಪ್ರಸಾರ ಆಗುತ್ತದೆ. ಇದರ ನಿರ್ಮಾಣಕ್ಕೆ 5-7 ಲಕ್ಷ ರೂಗಳನ್ನು ಹೂಡಿಕೆ ಮಾಡಲಾಗಿದೆ.
ತಂದೆಯ ಆಕಸ್ಮಿಕ ಮರಣದಿಂದ ಹತಾಶರಾದ ಜೋಶಿಯನ್ನು ಅವರ ಮಿತ್ರವಲಯ ಸಂತೈಯಿಸಿ ಮತ್ತೇ ಅವರು ತಮ್ಮನ್ನು ಬಣ್ಣದ ಲೋಕದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದರು. ಅವರ ಹಾರೈಕೆ ಮತ್ತು ವಿಶ್ವಾಸ ಈಗ ಜೋಶ್-ಈ-ಲೇ ರೂಪದಿಂದ ಗೆಲುವು ಸಾಧಿಸಿದೆ. ಅನೇಕ ಹರ್ಡಲ್ಸ್ ದಾಟಿರುವ ಜೋ ಗೆ ಗೆಲುವು ಜೊತೆ ಆಗಿರಲಿ!