ಹನ್ಸಿಕ ಕಿರಿಕಿರಿ... ಬೇಸತ್ತ ವಾಲು ನಿರ್ಮಾಪಕ !

ಬುಧವಾರ, 16 ಏಪ್ರಿಲ್ 2014 (09:21 IST)
PR
ಹನ್ಸಿಕ ಮೋಟ್ವಾನಿ ತನ ಪ್ರತಿಭೆ ಮತ್ತು ಗ್ಲಾಮರ್ ಎರಡರ ಮುಖಾಂತರ ತಮಿಳು ಜನರ ಮನ ಗೆದ್ದಾಕೆ. ಕಾಲಿವುಡ್ ನಲ್ಲಿ ಆಕೆಗೆ ನಂಬರ್ ಒನ್ ಪೊಸಿಶನ್. ಆಕೆಯ ಬಗ್ಗೆ ಹೇಳೋದೇ ಆದರೆ ಈಕೆ ತಮಿಳು ಪ್ರೇಕ್ಷಕರ ಮುದ್ದಿನ ಹುಡುಗಿ, ಒಂದರ ಹಿಂದೆ ಒಂದು ಗೆಲುವನ್ನು ಪಡೆದ ಈ ಚೆಲುವೆ ತನ್ನ ಜೊತೆ ಸದಾ ಏನಾದರೊಂದು ಕಾಂಟ್ರವರ್ಸಿ ತರ್ತಾ ಇರ್ತಾಳೆ.

ಹಿಂದೆ ಶಿಂಬು ಜೊತೆ ಪ್ರೇಮಾಯಣ ನಡಿಸಿದ್ದಾಗ ಹನ್ಸಿಕ ಈತನ ಜೊತೆ ವಾಲು ಅನ್ನುವ ಚಿತ್ರದಲ್ಲಿ ನಟಿಸಲು ಸಿದ್ಧ ಆಗಿದ್ದಳು. ಅದು ಅರ್ಧ ಭಾಗದಷ್ಟು ಚಿತ್ರೀಕರಣ ಸಹಿತ ಆಗಿತ್ತು. ಆದರೆ ಸ್ವಲ್ಪ ದಿನಗಳು ಆದ ಬಳಿಕ ಇವರಿಬ್ಬರ ನಡುವೆ ಪ್ರೀತಿ ಮುರಿದು ಬಿತ್ತು.

PR
ಆಗ ಶುರು ಆಯ್ತು ನೋಡಿ ವಾಲು ಚಿತ್ರಕ್ಕೆ ಸಂಬಂಧಪಟ್ಟ ಅಡೆತಡೆ. ಈ ಚಿತ್ರದಲ್ಲಿ ನಟಿಸಲಿ ಆಕೆ ತನ್ನ ಡೇಟ್ಸ್ ನೀಡಲೇ ಇಲ್ಲ. ಇದರಿಂದ ಸಾಕಷ್ಟು ತೊಂದರೆ ಎದುರಿಸಿದ್ದು ಈ ಚಿತ್ರದ ನಿರ್ಮಾಪಕರು. ಅವರು ಈಕೆಯ ಈ ಕಿರಿಕ್ ನೋಡಿ ಬೇಸತ್ತು ಹನ್ಸಿಕಾ ಮೇಲೆ ನಿರ್ಮಾಪಕರ ಮಂಡಳಿ ಯಲ್ಲಿ ದೂರು ನೀಡಿದ್ದಾರೆ.

ಆದರೆ ತಾನು ಡೇಟ್ಸ್ ಕೊಡದೆ ಇರುವುದಕ್ಕೂ ಪ್ರೀತಿ ಬ್ರೇಕ್ ಅಪ್ ಆಗಿರೋ ವಿಷಯಕ್ಕೂ ಒಂದಕ್ಕೊಂದು ಸಂಬಂಧವೇ ಇಲ್ಲ ಅಂತಾ ಇದ್ದಾಳೆ ಹನ್ಸಿಕ. ತಾನು ಸಾಕಷ್ಟು ಸರ್ತಿ ಸಮಯ ನೀಡಿದ್ದರು ಸಹ ಆತ ಅದನ್ನು ಬಳಸಿಕೊಳ್ಳದೆ ವೃಥ ತನ್ನ ಮೇಲೆ ಅಪವಾದ ಮಾಡುತ್ತಿದ್ದಾನೆ ಎಂದು ಹೇಳಿದ್ದಾಳೆ. ನಿಜಕ್ಕೂ ಹನ್ಸಿಕಾ ಸತ್ಯ ಹೇಳ್ತಾ ಇದ್ದಾಳ.. ಇದೆ ಸದ್ಯದ ಸುದ್ದಿ?!

ವೆಬ್ದುನಿಯಾವನ್ನು ಓದಿ