ಗಜಕೇಸರಿ v / s ಮಾಣಿಕ್ಯ.. ಗೆಲುವು ಯಾರಿಗೆ ?

ಗುರುವಾರ, 17 ಏಪ್ರಿಲ್ 2014 (09:17 IST)
PR
ಕನ್ನಡದ ಎರಡು ನಿರೀಕ್ಷಿತ ಚಿತ್ರಗಳು ತೆರೆ ಕಾಣಲು ಸಿದ್ಧ ಆಗಿದೆ ಈ ತಿಂಗಳ ಕೊನೆ ವಾರದಲ್ಲಿ ಸುದೀಪ್ ಅವರ ನಟನೆ ಮತ್ತು ನಿರ್ದೇಶನದ ಚಿತ್ರ ಮಾಣಿಕ್ಯ ಮತ್ತು ಯಶ್ ನಟನೆಯ ಗಜಕೇಸರಿ ಆ ಎರಡು ಚಿತ್ರಗಳಾಗಿವೆ. ಇವೆರಡು ಈ ತಿಂಗಳ 29ರಂದು ಬಿಡುಗಡೆಯ ಭಾಗ್ಯ ಕಾಣಲಿದೆ.

ಈ ಎರಡು ಚಿತ್ರಗಳು ಒಟ್ಟಾಗಿ ಬಿಡುಗಡೆ ಆಗುತ್ತಾ ಇರುವುದರಿಂದ ನಷ್ಟ ನಿಮಗೆ ಎನ್ನುವ ಮಾತನ್ನು ಅವರ ಜೊತೆ ಟ್ವೀಟ್ ಮಾಡಿದ ಒಬ್ಬರು ಹೇಳಿದಾಗ ಅಂತಹದ್ದೇನು ಆಗದು .ಅಕಸ್ಮಾತ್ ಪ್ರೇಕ್ಷಕರಿಗೆ ಯಶ್ ಚಿತ್ರ ಬೆಸ್ಟ್ ಅಂತ ಅನ್ನಿಸಿದರೆ ಅದಕ್ಕೆ ಸದಾ ಗೌರವಿಸುತ್ತೇನೆ, ಯಶ್ ಗೆ ಅಭಿನಂದನೆ ಹೇಳ್ತೀನಿ ಎನ್ನುವ ಮಾತನ್ನು ಸುದೀಪ್ ಹೇಳಿದ್ದಾರೆ. ಮಾಣಿಕ್ಯ ತೆಲುಗು ಚಿತ್ರ ಮಿರ್ಚಿ ರೀಮೇಕ್ ಚಿತ್ರವಾಗಿದೆ. ಸದ್ಯಕ್ಕೆ ಸ್ಯಾಂಡಲ್ ವುಡ್ ನಲ್ಲಿ ಯಶ್ ಹವಾ ಜೋರಾಗಿದೆ. ಇತ್ತೀಚೆಗಷ್ಟೇ ಬಿಡುಗಡೆ ಆಗಿದ್ದ ಯಶ್ ಚಿತ್ರ ರಾಜಹುಲಿ ಬಾಕ್ಸಾಫೀಸಲ್ಲಿ ಭಾರಿ ಸದ್ದು ಮಾಡಿತ್ತು.

ವೆಬ್ದುನಿಯಾವನ್ನು ಓದಿ