ರಾಧಿಕಾ ಕುಮಾರ ಸ್ವಾಮಿ - ಚಿರಂಜೀವಿ ಸರ್ಜಾ ರುದ್ರ ತಾಂಡವಕ್ಕೆ ಸಿದ್ಧ ಆಗಿದ್ದಾರಂತೆ!

ಶುಕ್ರವಾರ, 18 ಏಪ್ರಿಲ್ 2014 (10:38 IST)
PR
ಪಾಂಡಿಯ ನಾಡು ಚಿತ್ರದ ರೀಮೇಕ್ ನಲ್ಲಿ ರಾಧಿಕ ಕುಮಾರ ಸ್ವಾಮಿ ಮತ್ತು ಚಿರಂಜೀವಿ ಸರ್ಜಾ ಒಟ್ಟಾಗಿ ನಟಿಸುತ್ತಿದ್ದಾರೆ. ಈ ಜೋಡಿ ಮೂಟ್ಟ ಮೊದಲ ಬಾರಿಗೆ ಜೊತೆಯಾಗಿ ನಟಿಸುತ್ತಿದ್ದಾರೆ. ಈ ತಮಿಳು ಚಿತ್ರ 2013 ರಲ್ಲಿ ಬಿಡುಗಡೆ ಆಗಿತ್ತು. ಇದರಲ್ಲಿ ವಿಶಾಲ್ ಮತ್ತು ಲಕ್ಷ್ಮಿ ಮೆನನ್ ಮುಖ್ಯ ಪಾತ್ರಧಾರಿಗಳಾಗಿದ್ದರು. ಈಗ ಇದರ ರೀಮೇಕ್ ರುದ್ರ ತಾಂಡವ ದಲ್ಲಿ ರಾಧಿಕ ಮತ್ತು ಚಿರು ಒಂದಾಗಿ ನಟಿಸುತ್ತಿದ್ದಾರೆ. ಸಿನಿಮಾದ ಚಿತ್ರೀಕರಣವನ್ನು ಕೋಲಾರದ ಅನೇಕ ಜಾಗಗಳಲ್ಲಿ ಚಿತ್ರೀಕರಿಸಲಾಗುತ್ತದೆಯಂತೆ.

ಕಳೆದ ವರ್ಷವೇ ನಾನು ಮತ್ತು ಚಿರು ಒಟ್ಟಿಗೆ ನಟಿಸ ಬೇಕಿತ್ತು. ಅನೇಕ ಕಾರಣಗಳು ಈ ಒಂದು ಆಸೆಯನ್ನು ಕನಸು ಮಾಡಿತ್ತು. ಆದರೆ ಎಲ್ಲ ಸರಿಯಾಗಿದೆ, ಈಗ ಸಮಯ ಒದಗಿ ಬಂದಿದೆ ಒಟ್ಟಿಗೆ ನಟಿಸಲು ಎಂದು ರಾಧಿಕ ಹೇಳಿದ್ದಾರೆ. ಇದರಲ್ಲಿ ರಾಧಿಕ ಟೀಚರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹತ್ತು ವರ್ಷಗಳಲ್ಲಿ ಒಬ್ಬ ಯುವಕನ ಬದುಕಲ್ಲಿ ಆದ ಬದಲಾವಣೆಗಳ ಬಗ್ಗೆ ತೋರಿಸುವ ಪಾತ್ರದಲ್ಲಿ ಚಿರಂಜೀವಿ ಕಾಣಸಿಗುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ