ನನ್ನನ್ನು ಕೆಟ್ಟದಾಗಿ ಅಗ್ರಜ ಚಿತ್ರದಲ್ಲಿ ತೋರಿಸಿದ್ದಾರೆ - ಸಂಜನಾ!

ಶನಿವಾರ, 19 ಏಪ್ರಿಲ್ 2014 (10:05 IST)
PR
ಗಂಡ ಹೆಂಡ್ತಿ ಖ್ಯಾತಿಯ ಸಂಜನಾ ಸಿಕ್ಕಾಪಟ್ಟೆ ಬೇಸರ ಹೊಂದಿದ್ದಾಳೆ. ಆಕೆ ನಟನೆಯ ಹೊಸ ಚಿತ್ರ ಅಗ್ರಜದಲ್ಲಿ ತನ್ನನ್ನು ಕೆಟ್ಟದಾಗಿ ತೋರಿಸಿದ್ದಾರೆ ಎನ್ನುವುದೇ ಆಕೆಯ ಬೇಸರ. ಮೊದಲ ದಿನ ಮೊದಲ ಷೋ ವೀಕ್ಷಿಸಿದ ಬಳಿಕ ಆಕೆ ಈ ಬಗ್ಗೆ ಅಭಿಪ್ರಾಯವನ್ನು ಟ್ವೀಟಿಸಿ ಹೇಳಿದ್ದಾಳೆ. ಕಥೆಯಲ್ಲಿ ಇರುವ ಪಾತ್ರದಂತೆ ನನ್ನನ್ನು ತೋರಿಸಿಲ್ಲ. ನನಗೆ ಇದರಿನ ತುಂಬಾ ದುಃಖ ಆಗಿದೆ ಎನ್ನುವ ಮಾತನ್ನು ಆಕೆ . ಚಿತ್ರದಲ್ಲಿನ ಒಂದು ಸ್ನಾನದ ಸೀನ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾಳೆ.

ಬೆತ್ತಲೆ ಬೆನ್ನು ತೋರಿಸುವ ಸ್ನಾನದ ಸನ್ನಿವೇಶದಲ್ಲಿ ಇರುವುದು ನಾನೇ ಎಂಬಂತೆ ಚಿತ್ರದಲ್ಲಿ ಬಿಂಬಿಸಲಾಗಿದೆ. ಆದರೆ ಆ ಸನ್ನಿವೇಶದಲ್ಲಿ ಇರುವುದು ನಾನಲ್ಲ. ಚಿತ್ರದಲ್ಲಿ ತನ್ನನ್ನು ಅಶ್ಲೀಲವಾಗಿ ತೋರಿಸಲಾಗಿದೆ ಎಂದು ಆರೋಪಿಸಿದ್ದಾಳೆ ಸಂಜನಾ. ಈ ಚಿತ್ರದಲ್ಲಿ ನವರಸ ನಾಯಕ ಜಗ್ಗೇಶ್ ಮತ್ತು ದರ್ಶನ್ ನಟಿಸಿದ್ದಾರೆ.

ಗಂಡಹೆಂಡತಿ' ಸಂಜನಾ ಎಂದು ಚಿತ್ರದಲ್ಲಿ ನನ್ನ ಹೆಸರನ್ನು ಬಳಸಲಾಗಿದೆ. ಒಂದು ನೆಗಟೀವ್ ಶೇಡ್ ಉಳ್ಳ ಹೆಣ್ಣಿನ ಪಾತ್ರಕ್ಕೆ ತಮ್ಮ ಹೆಸರನ್ನು ಬಳಸಿಕೊಳ್ಳಲಾಗಿದೆ. ಬೆಡ್ ರೂಮ್ ದೃಶ್ಯದಲ್ಲಿ ಬೇರೆ ಕಲಾವಿದರನ್ನು ಬಳಸಿದ್ದಾರೆ. ಆದರೆ ನಾನೇ ಎಂಬಂತೆ ತೋರಿಸಲಾಗಿದೆ ಎನ್ನುವುದು ಆಕೆಯ ಬೇಸರ. ಆದರೆ ಈ ಬಗ್ಗೆ ತಾವು ಮೊದಲೇ ತಿಳಿಸಿದ್ದೆವು ಅಂತ ಹೇಳಿದ್ದಾರೆ ಚಿತ್ರತಂಡದವರು...

ವೆಬ್ದುನಿಯಾವನ್ನು ಓದಿ