ನೆನಪಾಗಿ ಉಳಿದ ನಾಗರಕಟ್ಟೆ ಶಂಕ್ರಣ್ಣನ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು..!
ಮಂಗಳವಾರ, 1 ಅಕ್ಟೋಬರ್ 2013 (12:45 IST)
PR
PR
ಶೇಖರ್ ಪೂಜಾರಿ
ಶಂಕರ್ ನಾಗ್... ಹೆಸರಿನಲ್ಲೇ ಶಕ್ತಿ ಇದೆ. ಹೊಸತನದ ಚೈತನ್ಯವಿದೆ.. ಹೊಸ ಪ್ರಯೋಗದ ಕನಸಿದೆ. ಕನ್ನಡ ಎಂದರೆ ಸಾಕು ಸೆಟೆದು ನಿಲ್ಲುವ ತ್ಯಾಗದ ಭಾವನೆ ಶಂಕರ್ ನಾಗ್ ಎಂಬುಹ ಹೆಸರಿನಲ್ಲಿದೆ. ಹೌದು ಶಂಕರ್ ನಾಗ್ ನಮ್ಮನ್ನಗಲಿ ಇಂದಿಗೆ 23 ವರ್ಷಗಳಾಗಿವೆ. ಆದರೆ ಅವರು ಕನ್ನಡಿಗರ ಮನಸ್ಸಿನಲ್ಲಿ ಎಂದಿಗೂ ಚಿರಾಯು. ಭೌತಿಕವಾಗಿ ಕಣ್ಣೆದುರು ಇಲ್ಲದಿದ್ದರೂ, ಮಾನಸಿಕವಾಗಿ ಕನ್ನಡಿಗರ ಮನದಲ್ಲಿ ಅಜರಾಮರವಾಗಿ ಉಳಿದ ರಾಜ.. ಈ ಆಟೋ ರಾಜ ಶಂಕ್ರಣ್ಣ.
ನಾಗರಕಟ್ಟೆ ಶಂಕರ್ ಅನ್ನೋ ಹೆಸರಿನಿಂದ ಬದುಕಿನ ಪಯಣ ಆರಂಭಿಸಿದ ಶಂಕರ್ ನಾಗ್ ಕನ್ನಡ ಚಿತ್ರರಂಗ ಮತ್ತು ರಂಗಭೂಮಿಗೆ ಮಹತ್ತರವಾದ ಕೊಡುಗೆ ನೀಡಿದ ಸೃಜನಶೀಲ ವ್ಯಕ್ತಿ. ನಟ, ನಿರ್ಮಾಪಕ, ನಿದೇರ್ಶಕ, ಬರಹಗಾರ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮದೇ ಛಾಪು ಮೂಡಿಸಿದ ಶಂಕರ್ ನಾಗ್ ಅಭಿಮಾನಿಗಳಿಗೆ ಮಾತ್ರ ಎಂದಿಗೂ ಆಟೋ ರಾಜನಾಗಿಯೇ ಉಳಿದಿದ್ದಾರೆ.
ಶಂಕರ್‌ನಾಗ್ ಅವರನ್ನು ಬಾಲ್ಯದಲ್ಲಿ ಭವಾನಿ ಶಂಕರ್ ಎಂದು ಕರೆಯುತ್ತಿದ್ದರಂತೆ.
ಇನ್ನಷ್ಟು ಸುದ್ದಿ ಮುಂದಿನ ಪುಟದಲ್ಲಿ...
PR
PR
ಶಂಕರ್‌ನಾಗ್ ಅವರನ್ನು ಬಾಲ್ಯದಲ್ಲಿ ಭವಾನಿ ಶಂಕರ್ ಎಂದು ಕರೆಯುತ್ತಿದ್ದರಂತೆ.
ನವೆಂಬರ್ 9,1954 ರಂದು ಕರ್ನಾಟಕದ ಹೊನ್ನಾವರ ತಾಲೂಕಿನ ಮಲ್ಲಾಪುರ ಎಂಬ ಪುಟ್ಟ ಹಳ್ಳಿಯಲ್ಲಿ ಶಂಕರ್ ನಾಗ್ ಅವರು ಜನಿಸಿದರು. ತಂದೆ ಹೊನ್ನಾವರದ ನಾಗರ ಕಟ್ಟೆಯ ಸದಾನಂದ. ಬಾಲ್ಯದಲ್ಲಿ ಪ್ರೀತಿಯಿಂದ ಭವಾನಿ ಶಂಕರ್ ಎಂದು ಇವರ ತಂದೆ ಕರೆಯುತ್ತಿದ್ದರು.
ಶಂಕರ್‌ನಾಗ್ ಮೊಟ್ಟ ಮೊದಲು ಕಾಲಿಟ್ಟಿದ್ದು ಮರಾಠಿ ರಂಗಭೂಮಿಗೆ.
ಇನ್ನಷ್ಟು ಸುದ್ದಿ ಮುಂದಿನ ಪುಟದಲ್ಲಿ..
PR
PR
PR
PR
ಶಂಕರ್‌ನಾಗ್ ಮೊಟ್ಟ ಮೊದಲು ಕಾಲಿಟ್ಟಿದ್ದು ಮರಾಠಿ ರಂಗಭೂಮಿಗೆ.
ಶಂಕರ್ ನಾಗ್ ತಮ್ಮ ವಿದ್ಯಾಭ್ಯಾಸದ ನಂತರ ಮುಂಬೈಗೆ ತೆರಳಿದರು. ಅಲ್ಲಿ ಮುಂಬೈನ ಮರಾಠಿ ಚಿತ್ರಮಂದಿರದ ಕಡೆಗೆ ಆಕರ್ಶಿತರಾದ ಶಂಕರ್ ತಮಗರಿವಿಲ್ಲದಂತೆ ಮರಾಠಿ ರಂಗಭೂಮಿಯಲ್ಲಿ ತಮ್ಮನ್ನು ತಾವು ತೊಡಗಿಕೊಂಡರು. ತಮ್ಮ ಗೆಳೆಯರೊಂದಿಗೆ ಅವರು ಚಿತ್ರಕತೆ ರಚಿಸಿದ ಮೊಟ್ಟ ಮೊದಲ ಮರಾಠಿ ಚಿತ್ರದ ಹೆಸರು ’22 ಜೂನ್ 1897’. ಈ ಚಿತ್ರ ಎಷ್ಟು ಪ್ರಖ್ಯಾತಿಗೊಂಡಿತ್ತು ಎಂದರೆ, ಇದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿತು. ಆರಂಭದಲ್ಲೇ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ ಕನ್ನಡಿಗ ಶಂಕರ್‌ನಾಗ್.. ಅದೂ ಅನ್ಯ ಭಾಷೆಯಲ್ಲಿ ಸಾಧಿಸಿ ತೋರಿಸಿದ ಸಾಧಕ.
ಶಂಕರ್‌ನಾಗ್ ವಿದ್ಯಾಭ್ಯಾಸ ಮುಗಿಸುವಷ್ಟರಲ್ಲಿ ಅಣ್ಣ ಅನಂತ್ ನಾಗ್ ಬ್ಯಾಂಕ್ ನೌಕರಿಗೇರಿದರು. ಅಣ್ಣನಂತೆ ತಮ್ಮನೂ ಕೂಡ ಬ್ಯಾಂಕ್ ನೌಕರಾನಾದರೂ ನಂತರದಲ್ಲಿ ಮರಾಠಿ ನಾಟಕಗಳ ಮೂಲಕ ತಮ್ಮ ವೃತ್ತಿ ಜೀವನವನ್ನು ಪ್ರಾರಂಭ ಮಾಡಿದರು.
ಗಿರೀಶ್ ಕಾರ್ನಾಡ್ ಅವರ ಒಂದಾನೊಂದು ಕಾಲದಲ್ಲಿ ಚಿತ್ರದ ಮೂಲಕ ಕನ್ನಡಕ್ಕೆ ಕಾಲಿಟ್ಟ ಶಂಕರ್‌ನಾಗ್
ಇನ್ನಷ್ಟು ಸುದ್ದಿ ಮುಂದಿನ ಪುಟದಲ್ಲಿ....
PR
PR
ಗಿರೀಶ್ ಕಾರ್ನಾಡ್ ಅವರ ಒಂದಾನೊಂದು ಕಾಲದಲ್ಲಿ ಚಿತ್ರದ ಮೂಲಕ ಕನ್ನಡಕ್ಕೆ ಕಾಲಿಟ್ಟ ಶಂಕರ್‌ನಾಗ್
ಗಿರೀಶ್ ಕಾರ್ನಾಡರ 'ಒಂದಾನೊಂದು ಕಾಲದಲ್ಲಿ' ಎನ್ನುವ ಚಿತ್ರದ ಮೂಲಕ ಶಂಕರ್‌ನಾಗ್ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಒಂದಾನೊಂದು ಕಾಲದಲ್ಲಿ ಚಿತ್ರದ ಅಭಿನಯಕ್ಕೆ ಸ್ಪರ್ಧಾರ್ಥಕ ಅಂತರರಾಷ್ಟೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಗಳಿಸಿದರು ಶಂಕರ್ ನಾಗ್. ನಂತರ ಅವರು ಹಿಂದೆ ತಿರುಗಿ ನೋಡಿದ್ದೇ ಇಲ್ಲ. ಸತತ 12 ವರ್ಷಗಳ ಕಾಲ ಕನ್ನಡದಲ್ಲಿ ಸುಮಾರು 90 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದರು.
ಶಂಕರ್‌ನಾಗ್ ಪ್ರಥಮ ಬಾರಿಗೆ ತ್ರಿಪಾತ್ರದಲ್ಲಿ ಅಭಿನಯಿಸಿದ ಚಿತ್ರ "ಗೆದ್ದ ಮಗ". ಅನಂತ ನಾಗ್ ಅವರೊಡನೆ "ಮಿಂಚಿನ ಓಟ", "ಜನ್ಮ ಜನ್ಮದ ಅನುಬಂಧ" ಮತ್ತು "ಗೀತಾ" ಚಿತ್ರಗಳನ್ನು ನಿರ್ಮಿಸಿದರು. ಎಸ್‌ಪಿ ಸಾಂಗ್ಲಿಯಾನ ಚಿತ್ರ ಆಗಿನ ಕಾಲದಲ್ಲಿ ಭರ್ಜರಿ ಸದ್ದು ಮಾಡಿತ್ತು. ಸಿಬಿಐ ಶಂಕರ್ ಚಿತ್ರದಲ್ಲಿನ ಅಭೂತಪೂರ್ವ ನಟನೆ, ಆಟೋ ಶಂಕರ್ ಪಾತ್ರವನ್ನು ಸ್ವಾಭಿಮಾನಿ ಕನ್ನಡಿಗರು ಎಂದೆಂದಿಗೂ ಮರೆಯಲಾಗುವುದಿಲ್ಲ. ಅವೆಲ್ಲವೂ ಇಂದಿಗೂ ಅಜರಾಮರ.
ಗಿರೀಶ ಕಾರ್ನಾಡ ರ "ಅಂಜು ಮಲ್ಲಿಗೆ", "ನೋಡಿ ಸ್ವಾಮಿ ನಾವಿರೋದು ಹೀಗೆ" ಸೇರಿದಂತೆ ಕೆಆರ್ ನಾರಾಯಣ್ ಅವರ ಮಾಲ್ಗುಡಿ ಡೇಸ್ ಕೃತಿಗಳನ್ನು ನಾಟಕಗಳನ್ನಾಗಿ ರೂಪಿಸಿ ಜನರ ಮನದಲ್ಲಿ ಉಳಿಯುವಂತೆ ಮಾಡಿದ ಕ್ರಿಯೇಟಿವಿಟಿಯ ಹರಿಕಾರ ಶಂಕರ್ ನಾಗ್.
ದೇಶದಲ್ಲೇ ದಾಖಲೆ ಮಾಡಿದ "ಮಾಲ್ಗುಡಿ ಡೇಸ್" ಗೆ ಶಂಕರ್‌ನಾಗ್ ನಿರ್ದೇಶನ.
ಇನ್ನಷ್ಟು ಸುದ್ದಿ ಮುಂದಿನ ಪುಟದಲ್ಲಿ..
PR
PR
ದೇಶದಲ್ಲೇ ದಾಖಲೆ ಮಾಡಿದ "ಮಾಲ್ಗುಡಿ ಡೇಸ್" ಗೆ ಶಂಕರ್‌ನಾಗ್ ನಿರ್ದೇಶನ.
ಭಾರತೀಯ ದೂರದರ್ಶನದಲ್ಲೇ ದಾಖಲೆ ನಿರ್ಮಿಸಿದ ಅತ್ಯಂತ ಜನಪ್ರಿಯವಾದ ಆರ್.ಕೆ. ನಾರಾಯಣ್ ಅವರ "ಮಾಲ್ಗುಡಿ ಡೇಸ್ ಧಾರಾವಾಹಿ ಶಂಕರ್‌ನಾಗ್ ಕ್ರಿಯೇಟಿವಿಟಿಯಿಂದ ಮೂಡಿ ಬಂದಿದ್ದು ,ಇಂದೂ ಸಹ ಹೆಚ್ಚು ಜನ ಪ್ರಿಯತೆಯನ್ನು ಗಳಿಸಿದೆ. ಮರು ಪ್ರಸಾರಗೊಳ್ಳುತ್ತಿದೆ. ಪಂಡಿತರು, ಬುದ್ಧಿ ಜನಾಂಗದಿಂದಲೂ ಮೆಚ್ಚುಗೆ ಗಳಿಸಿದ ಮಹೋನ್ನತ ಧಾರವಾಹಿ ‘ಮಾಲ್ಗುಡಿ ಡೇಸ್’
ಶಂಕರ್‌ನಾಗ್ ಬದುಕು ಹೇಗಿತ್ತು? ಅವರ ಕನಸುಗಳು ಏನಾಗಿದ್ದವು?
ಇನ್ನಷ್ಟು ಸುದ್ದಿ ಮುಂದಿನ ಪುಟದಲ್ಲಿ...
PR
PR
ಶಂಕರ್‌ನಾಗ್ ಬದುಕು ಮತ್ತು ಕನಸುಗಳು
ಶಂಕರ್ ನಾಗ್ ಅವರು ಕಲಾವಿದೆಯಾಗಿದ್ದ ಅರುಂಧತಿ ಅವರನ್ನು ಇಷ್ಟ ಪಟ್ಟು ಪ್ರೀತಿಸಿ ನಂತರ ಮದುವೆಯಾದರು. ಇವರ ಪ್ರೀತಿಗೆ ಸಾಕ್ಷಿಯಾಗಿ ಕಾವ್ಯ ಎಂಬ ಮಗಳು ಕೂಡ ಇದ್ದಾಳೆ.
ಶಂಕರನಾಗ್ ಅವರಿಗೆ ರಂಗಭೂಮಿಯ ಕಲಾವಿದರಿಗೆ ನೆರವಾಗುವಂತೆ ನಾಟಕಮಂದಿರವೊಂದನ್ನು ನಿರ್ಮಿಸಬೇಕೆಂಬ ಆಸೆ ಇತ್ತು. ಆದ್ರೆ ವಿಧಿ ವಿಪರ್ಯಾಸವೆಂದರೆ, ಆ ಯೋಜನೆಯು ಕಾರ್ಯರೂಪಕ್ಕೆ ಬರುವ ಮುಂಚೆಯೇ ಶಂಕರನಾಗ್ ಅವರು ಅಪಘಾತದಲ್ಲಿ ದುರ್ಮರಣಕ್ಕೀಡಾದರು. ಆದ್ರೆ ಅವರ ಪತ್ನಿ ಅರುಂಧತಿನಾಗ್ ಆ ಯೋಜನೆಯನ್ನು ಮುಂದುವರೆಸಿ, ಕಾರ್ಯರೂಪಕ್ಕೆ ತಂದಿದ್ದಾರೆ. ಆ ರಂಗಮಂದಿರಕ್ಕೆ"ರಂಗಶಂಕರ" ಎಂದು ಹೆಸರಿಟ್ಟಿದ್ದಾರೆ.
ಅಣ್ಣಾವ್ರ ಸಿನೆಮಾ ನಿರ್ದೇಶನ ಮಾಡಿದ ಶಂಕರ್‌ನಾಗ್. ಇನ್ನಷ್ಟು ಸುದ್ದಿ ಮುಂದಿನ ಪುಟದಲ್ಲಿ...
PR
PR
ಅಣ್ಣಾವ್ರ ಸಿನೆಮಾ ನಿರ್ದೇಶನ ಮಾಡಿದ ಶಂಕರ್‌ನಾಗ್..
ಡಾ.ರಾಜ್ ಕುಮಾರ್ ಅಭಿನಯಿಸಿರುವ "ಒಂದು ಮುತ್ತಿನ ಕಥೆ" ಚಿತ್ರವನ್ನು ಶಂಕರನಾಗ್ ನಿರ್ದೇಶಿಸಿದ್ದರು. ಈ ಮೂಲಕ ಅಣ್ಣಾವ್ರ ಜೊತೆಗೂ ಉತ್ತಮ ಒಡನಾಟವನ್ನು ಹೊಂದಿದ್ದರು. ಶಂಕರ್ ಅತ್ಯಂತ ಕಿರಿಯ ವಯಸ್ಸಿನಲ್ಲೇ ಉನ್ನತ ಮಟ್ಟಕ್ಕೇರಿದ ಅಭೂತಪೂರ್ವ ಪ್ರತಿಭೆ ಎಂದರೆ ಅತಿಶಯೋಕ್ತಿಯಲ್ಲ.
ಇಂಜಿನಿಯರ್ ಆಗಿ ಶಂಕರ್ ಕಂಡಿದ್ದ ಕನಸು ಏನು ಗೊತ್ತಾ?.. ಇನ್ನಷ್ಟು ಸುದ್ದಿ ಮುಂದಿನ ಪುಟದಲ್ಲಿ...
PR
PR
ಇಂಜಿನಿಯರ್ ಆಗಿ ಶಂಕರ್ ಕಂಡಿದ್ದ ಕನಸು..
ಬೆಂಗಳೂರು ಮೆಟ್ರೋ ಕನಸನ್ನು ಶಂಕರ್‌ನಾಗ್ ಅಂದಿನ ಕಾಲದಲ್ಲಿಯೇ ಕಂಡಿದ್ದರು. ಅಷ್ಟೇ ಅಲ್ಲ, ಬೆಟ್ಟಕ್ಕೆ ರೋಪ್ ವೇ ಹಾಕುವುದು, ರಂಗಮಂದಿರಗಳ ಅಭಿವೃದ್ಧಿ, ಸೇರಿದಂತೆ ಕರ್ನಾಟಕದ ಅಭಿವೃದ್ದಿಯ ಕನಸನ್ನು ಕಂಡಿದ್ದರು ಶಂಕರ್ ನಾಗ್. ಸಂಕೇತ್ ಸ್ಟುಡಿಯೋ ಶಂಕರ್ ನಾಗ್ ಅವರ ಮತ್ತೊಂದು ಕಲಾ ಕೊಡುಗೆಯಾಗಿದೆ.
ಬಡವರಿಗೆ ಕಡಿಮೆ ದರದಲ್ಲಿ ಮನೆ ನೀಡುವ ಆಸೆ ಶಂಕರ್ ನಾಗ್ ಅವರಿಗೆ ಇತ್ತು.
ಇನ್ನಷ್ಟು ಸುದ್ದಿ ಮುಂದಿನ ಪುಟದಲ್ಲಿ...
PR
PR
ಬಡವರಿಗೆ ಕಡಿಮೆ ದರದಲ್ಲಿ ಮನೆ ನೀಡುವ ಆಸೆ ಶಂಕರ್ ನಾಗ್ ಅವರಿಗೆ ಇತ್ತು.
ಬಡವರಿಗೆ ಕಡಿಮೆ ದರದಲ್ಲಿ, ಅತ್ಯಂತ ಕಡಿಮೆ ದಿನಗಳಲ್ಲಿ ಮನೆಗಳನ್ನು ನಿರ್ಮಿಸಿ ಕೊಡಬೇಕೆಂಬ ಅಭಿಲಾಷೆ ಶಂಕರ್‌ನಾಗ್ ಅವರಿಗೆ ಇತ್ತು. ಈ ಸಂಬಂಧ ನಕ್ಷೆ ತಯಾರಿಸಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ರಾಮಕೃಷ್ಣ ಹೆಗ್ಗಡೆಯಚವರ ಸರ್ಕಾರದ ಮುಂದೆ ತಮ್ಮ ಎಲ್ಲಾ ಧ್ಯೇಯೋದ್ದೇಶಗಳು ಮತ್ತು ಕಾರ್ಯಯೋಜನೆಗಳನ್ನು ಇಟ್ಟಿದ್ದರು. ದುರಾದೃಷ್ಟ ಎಂದರೆ, ಶಂಕರ್‌ನಾಗ್ ಅವರ ಕನಸಿನ ಕಾರ್ಯಯೋಜನೆಗಳಿಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ. ಹಾಗೇನಾದರೂ ಸರ್ಕಾರ ಸ್ಪಂದಿಸಿದಿದ್ರೆ, ಇಷ್ಟೋತ್ತಿಗಾಗಲೇ ಬೆಂಗಳೂರು ತುಂಬಾ ಮೆಟ್ರೋ ರೈಲುಗಳ ಅಬ್ಬರ ಜೋರಾಗಿರುತ್ತಿತ್ತು.
ಕನ್ನಡ ಚಿತ್ರರಂಗಕ್ಕೆ ಅರಗಿಸಿಕೊಳ್ಳಲಾಗದ ಅಪಘಾತ.
ಇನ್ನಷ್ಟು ಸುದ್ದಿ ಮುಂದಿನ ಪುಟದಲ್ಲಿ...
PR
PR
ಕನ್ನಡ ಚಿತ್ರರಂಗಕ್ಕೆ ಅರಗಿಸಿಕೊಳ್ಳಲಾಗದ ಅಪಘಾತ.
ಸೆಪ್ಟೆಂಬರ್ 30, 1990 ರಲ್ಲಿ ’ಜೋಕುರಸ್ವಾಮಿ’ ಎಂಬ ಚಿತ್ರದ ಚಿತ್ರೀಕರಣಕ್ಕಾಗಿ ಕಾರಿನಲ್ಲಿ ದಾವಣಗೆರೆಗೆ ತೆರಳುತ್ತಿದ್ದರು. ದಾವಣಗೆರೆ ಬಳಿಯ ಅನಗೋಡು ಎಂಬ ಹಳ್ಳಿಯ ಸಮೀಪಕ್ಕೆ ಬರುತ್ತಿರುವಂತೆ ಶಂಕರ್ ನಾಗ್ ಅವರ ಕಾರು ಅಪಘಾತಕ್ಕೀಡಾಯಿತು. ಇದರಿಂದ ತೀವ್ರ ಗಾಯಗೊಂಡಿದ್ದ ಅದಮ್ಯ ಚೇತನ ಶಂಕರ್ ನಾಗ್ ಕೊನೆಯುಸಿರೆಳೆದರು.
ಶಂಕರ್ ನಾಗ್ ವರ ಕೊನೆಯ ಸಿನೆಮಾ "ನಿಗೂಢ ರಹಸ್ಯ"
ಇನ್ನಷ್ಟು ಸುದ್ದಿ ಮುಂದಿನ ಪುಟದಲ್ಲಿ...
PR
PR
ಶಂಕರ್ ನಾಗ್ ವರ ಕೊನೆಯ ಸಿನೆಮಾ "ನಿಗೂಢ ರಹಸ್ಯ"
ಕನ್ನಡ ಜನತೆಗೆ ಶಂಕರ್‌ನಾಗ್ ಕೊನೆಯದಾಗಿ ಬಿಟ್ಟು ಹೋದ ಚಿತ್ರವೆಂದರೆ, ನಿಗೂಢ ರಹಸ್ಯ. ಇದು ಶಂಕರ್ ನಾಗ್ ಅಭಿನಯದ ಕೊನೆಯ ಚಿತ್ರ. ಈ ಸಿನೆಮಾದಲ್ಲಿ ನಿಗೂಢ ರಹಸ್ಯವನ್ನು ಭೇದಿಸುವ ಸಾಹಸಿಗನಾಗಿ ಕಾಣಿಸಿಕೊಂಡಿರುವ ಶಂಕರ್‌ನಾಗ್ ಸಾವು ಕನ್ನಡಿಗರಿಗೆ ಅರಗಿಸಿಕೊಳ್ಳಲಾದೇ ನಿಗೂಢ ರಹಸ್ಯವಾಗಿ ಉಳಿದುಬಿಟ್ಟಿತು.