ವಾಟ್ಸ್ ಆ್ಯಪ್ ಗೆ ಫಿಂಗರ್ ಪ್ರಿಂಟ್ ಲಾಕ್ ಹಾಕುವುದು ಹೇಗೆ ಗೊತ್ತಾ?

ಶನಿವಾರ, 2 ನವೆಂಬರ್ 2019 (06:43 IST)
ನವದೆಹಲಿ : ವಾಟ್ಸ್ ಆ್ಯಪ್ ಗೆ ಹೆಚ್ಚಿನ ಭದ್ರತೆ ಒದಗಿಸಲು ಆಂಡ್ರಾಯ್ಡ್ ಬಳಕೆದಾರರಿಗಾಗಿ ಫಿಂಗರ್ ಪ್ರಿಂಟ್ ಲಾಕ್ ಫೀಚರ್ ನ್ನು ಪರಿಚಯಿಸಿದೆ.




ಈ ಹಿಂದೆ ಆ್ಯಪಲ್ ಐಒಎಸ್ ಬಳಕೆದಾರರಿಗೆ ಮಾತ್ರ ಟಚ್ ಐಡಿ ಮತ್ತು ಫೇಸ್ ಐಡಿ ಆಯ್ಕೆಯನ್ನು ನೀಡಿತ್ತು. ಆದರೆ ಇದೀಗ ಆಂಡ್ರಾಯ್ಡ್ ಬಳಕೆದಾರರ ವೈಯಕ್ತಿಕ ಚಾಟ್ ಹಾಗೂ ರಕ್ಷಣೆಗಾಗಿ ವಾಟ್ಸ್ ಆ್ಯಪ್ ಸಂಸ್ಥೆ ಫಿಂಗರ್ ಪ್ರಿಂಟ್  ಲಾಕ್ ಫೀಚರ್ ನ್ನು ನೀಡುತ್ತಿದೆ.


ಫಿಂಗರ್ ಪ್ರಿಂಟ್ ಲಾಕ್ ಬಳಸುವ ವಿಧಾನ:
ಮೊದಲಿಗೆ ಗೂಗಲ್ ಪ್ಲೇಸ್ಟೋರ್ ಗೆ ಹೋಗಿ  ಮೈ ಆ್ಯಪ್ ಮೂಲಕ ವಾಟ್ಸ್ ಆ್ಯಪ್ ಅನ್ನು ಅಪ್ಡೇಟ್ ಮಾಡಿ. ನಂತರ ವಾಟ್ಸ್ ಆ್ಯಪ್ ಓಪನ್ ಮಾಡಿ ಅದರಲ್ಲಿ ಸೆಟ್ಟಿಂಗ್ - ಅಕೌಂಟ್ -ಪ್ರೈವಸಿ- ಫಿಂಗರ್ ಪ್ರಿಂಟ್ ಲಾಕ್ ಆಯ್ಕೆ ಮಾಡಿ ಟರ್ನ್ ಆನ್ ಮಾಡಿ. ಆಗ ಫಿಂಗರ್ ಪ್ರಿಂಟ್ ಲಾಕ್ ಲಭ್ಯವಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ