ಡಿಜಿಟಲ್ ರಿಚಾರ್ಜ್ ಗಾಗಿ ಜಿಯೋ ಬಿಡುಗಡೆ ಮಾಡಿದೆ ಸಾರತಿ ಯೋಜನೆ
ಮಂಗಳವಾರ, 30 ಜುಲೈ 2019 (08:51 IST)
ನವದೆಹಲಿ : ಗ್ರಾಹಕರಿಗೆ ಡಿಜಿಟಲ್ ರಿಚಾರ್ಜ್ ಸುಲಭಗೊಳಿಸಲು ರಿಲಾಯನ್ಸ್ ಜಿಯೋ ಹೊಸ ಧ್ವನಿ ಆಧಾರಿತ ಸಹಾಯಕ ಸಾರತಿ ಯೋಜನೆಯನ್ನು ಮೈ ಜಿಯೋ ಅಪ್ಲಿಕೇಷನ್ ನಲ್ಲಿ ಬಿಡುಗಡೆ ಮಾಡಿದೆ.
ಜಿಯೋ ಚಂದಾದಾರರಿಗೆ ಡಿಜಿಟಲ್ ರೀಚಾರ್ಜ್ ಮಾಡಲು ಇದರಿಂದ ಅನುಕೂಲವಾಗಲಿದ್ದು, ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರು ಇದರ ಮೂಲಕ ಸುಲಭವಾಗಿ ರಿಚಾರ್ಜ್ ಮಾಡಬಹುದಾಗಿದೆ. ಸ್ಮಾರ್ಟ್‌ಫೋನ್‌ಗಳಲ್ಲಿ ಇತ್ತೀಚಿನ ಮೈಜಿಯೊ ಅಪ್ಲಿಕೇಶನ್ ಹೊಂದಿರಬೇಕು. ಬಳಕೆದಾರರು ರೀಚಾರ್ಜ್ ಬಟನ್ ಒತ್ತಿದ ನಂತರ ಅಪ್ಲಿಕೇಶನ್ ಫ್ಲೋಟಿಂಗ್ ಐಕಾನ್ ರೂಪದಲ್ಲಿ ಕಾಣುತ್ತದೆ. ಬಳಕೆದಾರರು ಡಿಜಿಟಲ್ ರೀಚಾರ್ಜ್ ಗಾಗಿ ಧ್ವನಿ ಆಧಾರಿತ ನಿರ್ದೇಶನಗಳನ್ನು ಸ್ವೀಕರಿಸಲು ಈ ಐಕಾನ್ ಅನ್ನು ಟ್ಯಾಪ್ ಮಾಡಬೇಕಾಗುತ್ತದೆ.
ಹಾಗೇ ಜಿಯೋ ಸಾರತಿ ನಲ್ಲಿ ಇತ್ತೀಚಿನ ರಿಚಾರ್ಜ್ ಪ್ಯಾಕ್ ಬಗ್ಗೆ ಮಾಹಿತಿ ಸಿಗಲಿದೆ. ಇದರ ಮೂಲಕ ನಿಮ್ಮ ನಂಬರ್ ಗೆ ಸುಲಭವಾಗಿ ರಿಚಾರ್ಜ್ ಮಾಡಬಹುದು. ರಿಚಾರ್ಜ್ ಗೆ ಗ್ರಾಹಕರು ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಬಹುದು. ಸದ್ಯ ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಲಭ್ಯವಿದ್ದು, ಶೀಘ್ರವೇ 12 ಭಾಷೆಗಳಲ್ಲಿ ಸಾರತಿ ಲಭ್ಯವಾಗಲಿದೆ. ಜಿಯೋ ಸಾರತಿ ಜುಲೈ 27 ರಿಂದ ಮೈಜಿಯೊ ಆಪ್ ನಲ್ಲಿ ಲಭ್ಯವಾಗಲಿದೆ ಎನ್ನಲಾಗಿದೆ.