ಇನ್ನು ಮುಂದೆ ಇನ್ ಕಮಿಂಗ್ ಕಾಲ್ ಸ್ವೀಕರಿಸಲು ರಿಚಾರ್ಜ್ ಮಾಡಲೇಬೇಕಂತೆ

ಗುರುವಾರ, 22 ನವೆಂಬರ್ 2018 (12:54 IST)
ನವದೆಹಲಿ : ಇಷ್ಟು ದಿನ ಮೊಬೈಲ್ ಬಳಕೆದಾರರು ರಿಚಾರ್ಚ್ ಮಾಡಲಿ, ಮಾಡದೇ ಇರಲಿ ನ್ ಕಮಿಂಗ್ ಕಾಲ್ ಮಾತ್ರ ಉಚಿತವಾಗಿ ಸಿಗುತ್ತಿತ್ತು. ಆದರೆ ಇನ್ನುಮುಂದೆ ಇನ್ ಕಮಿಂಗ್ ಕಾಲ್ ಗೂ  ರಿಚಾರ್ಚ್ ಮಾಡಬೇಕಾಗುತ್ತದೆ.


ಹೌದು. ಕೆಲವು ಟೆಲಿಕಾಮ್ ಸಂಸ್ಥೆಗಳು ಜಿಯೋಗೆ ಪೈಪೋಟಿ ನೀಡಲು ಹೋಗಿ ವಿವಿಧ ಆಫರ್ ಗಳನ್ನು ಘೋಷಣೆ ಮಾಡಿ ಇದೀಗ ಬಾರೀ ನಷ್ಟದಲ್ಲಿ ಸಿಲುಕಿವೆ. ಅಲ್ಲದೇ ಕೇವಲ 10 ರೂಗಳಿಗೆ ಜಿಯೋ ಸಿಮ್ ದೊರೆಯುತ್ತಿದ್ದು, ಇದರಲ್ಲಿ ಇನ್ ಕಮಿಂಗ್ ಕರೆಗಳೂ ಮತ್ತು ಮೂರು ತಿಂಗಳ ಹೊರ ಹೋಗುವ ಕರೆಗಳೂ ಉಚಿತವಾಗಿ ದೊರೆಯುತ್ತಿವೆ. ಇದೇ ಕಾರಣಕ್ಕೆ ಗ್ರಾಹಕರು ರಿಚಾರ್ಜ್ ಗಿಂತ ಹೊಸ ಸಿಮ್ ಕಾರ್ಡ್ ಖರೀದಿ ಮಾಡಲು ಮುಂದಾಗುತ್ತಿದ್ದಾರೆ ಎನ್ನಲಾಗಿದೆ.


 
ಆದಕಾರಣ ಉಚಿತ ಇನ್ ಕಮಿಂಗ್ ಕಾಲ್ ಸೇವೆ ಸ್ಥಗಿತಗೊಳಿಸಿ ಅದಕ್ಕೂ ನಿಗದಿತ ದರ ವಿಧಿಸಲು ಟೆಲಿಕಾಮ್ ಸಂಸ್ಥೆಗಳು ಮುಂದಾಗಿವೆ. ಇನ್ನು ಮುಂದೆ ರಿಚಾರ್ಜ್ ಮಾಡಿ ಅದು ಮುಕ್ತಾಯದ ಬಳಿಕ ಗ್ರಾಹಕನು ರಿಚಾರ್ಜ್ ಮಾಡಿಸಿದರೆ ಮಾತ್ರ ಮೊಬೈಲ್ ಸಂಖ್ಯೆ ಚಾಲನೆಯಲ್ಲಿರುತ್ತದೆ. ಇಲ್ಲವಾದರೆ ಯಾವುದೇ ಕರೆ ಸ್ವೀಕರಿಸಲು ಸಾಧ್ಯವಾಗುವುದಿಲ್ಲ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ