ಸಾರ್ವಜನಿಕ ವಲಯದಿಂದಲೂ ಕೇಳಿಬಂದಿದೆ ಮೀಟೂ ಆರೋಪ

ಬುಧವಾರ, 31 ಅಕ್ಟೋಬರ್ 2018 (14:38 IST)
ಹಾಸನ : ಮೀಟೂ ಅಭಿಯಾನದಲ್ಲಿ ಇಷ್ಟುದಿನ ನಟಿಯರ ಆರೋಪ ಕೇಳಿಬರುತ್ತಿತ್ತು. ಆದರೆ ಇದೀಗ ಸಾರ್ವಜನಿಕ ವಲಯದಿಂದಲೂ ಲೈಂಗಿಕ ಕಿರುಕುಳದ ಆರೋಪ ಕೇಳಿಬರುತ್ತಿದೆ.


ಹೌದು. ಹಾಸನದ ಯುವತಿಯೊಬ್ಬಳು ಮೀಟೂ ಅಭಿಯಾನದ ಮೂಲಕ ತನಗಾದ ನೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾಳೆ. ಹಾಸನದ ಸರ್ಕಾರಿ ನೌಕರ ಕೃಷ್ಣೇಗೌಡ ಎಂಬವವರು ಕೆಲಸ ಕೊಡಿಸುವ ನೆಪದಲ್ಲಿ ನನ್ನ ಮೊಬೈಲ್ ನಂಬರ್ ಪಡೆದು ಲೈಂಗಿಕ ಕಿರುಕುಳ ನೀಡುತ್ತಿದ್ದ ಅಲ್ಲದೇ ಮುತ್ತು ಕೊಡು, ನಾನು ಕರೆದಲ್ಲಿಗೆ ಬಾ ನಿನಗೆ ಬೇಕಾದಷ್ಟು ಹಣ ಕೊಡುವೆ ಎಂದು ಒತ್ತಾಯಿಸುತ್ತಿದ್ದ ಎಂದು ಯುವತಿ ಆರೋಪಿಸಿದ್ದಾಳೆ.


ಹಾಗೇ ಯುವತಿ ಹಾಸನ ಎಸ್‍ಪಿ ಪ್ರಕಾಶ್ ಗೌಡ ನೆರವಿಗೆ ಬರುವಂತೆ ಮನವಿ ಮಾಡಿ ಇಂತಹ ಕಾಮುಕರಿಗೆ ಕಾನೂನು ಚೌಕಟ್ಟಿನಲ್ಲಿ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದ್ದಾಳೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ