ಯೋಗೀಶ್‌ ಅತ್ಯುತ್ತಮ ನಟ, ರಾಧಿಕಾ ಅತ್ಯುತ್ತಮ ನಟಿ ಪ್ರಶಸ್ತಿ

2008-09ರ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಸರಕಾರ ಶುಕ್ರವಾರ (ಡಿಸೆಂಬರ್ 3) ಪ್ರಕಟಿಸಿದ್ದು, ಅತ್ಯುತ್ತಮ ನಟ-ನಟಿ ಪ್ರಶಸ್ತಿ 'ಅಂಬಾರಿ' ಚಿತ್ರಕ್ಕಾಗಿ ಯೋಗೀಶ್ ಮತ್ತು 'ಮೊಗ್ಗಿನ ಮನಸು' ಚಿತ್ರಕ್ಕಾಗಿ ರಾಧಿಕಾ ಪಂಡಿತ್ ಪಾಲಾಗಿದೆ. ಅತ್ಯುತ್ತಮ ಚಿತ್ರ ಕಬಡ್ಡಿ, ಎರಡನೇ ಅತ್ಯುತ್ತಮ ಚಿತ್ರ ಜೋಶ್ ಚಿತ್ರಕ್ಕೆ ಲಭಿಸಿದೆ.

ಡಾ. ರಾಜ್‌ಕುಮಾರ್ ಪ್ರಶಸ್ತಿ ಹಿರಿಯ ನಟಿ ಬಿ. ಸರೋಜಾ ದೇವಿಯವರ ಪಾಲಾದರೆ, ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಕೊನೆಯ ಕ್ಷಣದಲ್ಲಿ ಗಿರೀಶ್ ಕಾರ್ನಾಡ್‌ರವರಿಗೆ ಸಂದಿದೆ.

ಪ್ರಶಸ್ತಿ ಸಮಿತಿ ಅಧ್ಯಕ್ಷ, ಹಿರಿಯ ನಿರ್ದೇಶಕ ಭಾರ್ಗವ ಪ್ರಕಟಿಸಿರುವ ಪ್ರಶಸ್ತಿ ಪಟ್ಟಿ ಹೀಗಿದೆ.

** ಡಾ. ರಾಜ್‌ಕುಮಾರ್ ಪ್ರಶಸ್ತಿ - ಡಾ. ಬಿ. ಸರೋಜಾ ದೇವಿ
** ದಿವಂಗತ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ - ಗಿರೀಶ್ ಕಾರ್ನಾಡ್
** ಜೀವಮಾನದ ಸಾಧನೆಗಾಗಿ ವಿಶೇಷ ಪ್ರಶಸ್ತಿ - ಅಜಂತಾ ರಾಜು (ಎ.ಆರ್. ರಾಜು) ಮತ್ತು ಆರ್.ಎನ್.ಕೆ. ಪ್ರಸಾದ್.

** ಅತ್ಯುತ್ತಮ ಚಿತ್ರ - ಕಬಡ್ಡಿ (ನಿರ್ದೇಶನ - ನರೇಂದ್ರ ಬಾಬು)
** ಎರಡನೇ ಅತ್ಯುತ್ತಮ ಚಿತ್ರ - ಜೋಶ್ (ನಿರ್ದೇಶಕ - ಶಿವಮಣಿ)
** ಮೂರನೇ ಅತ್ಯುತ್ತಮ ಚಿತ್ರ - ಶಂಕರ ಪುಣ್ಯಕೋಟಿ (ನಿರ್ದೇಶನ - ಜಿ. ಮೂರ್ತಿ)
** ಸಾಮಾಜಿಕ ಕಳಕಳಿಯ ವಿಶೇಷ ಚಿತ್ರ - ಮುಖಪುಟ (ನಿರ್ದೇಶನ - ರೂಪಾ ಅಯ್ಯರ್)
** ಅತ್ಯುತ್ತಮ ಮಕ್ಕಳ ಚಿತ್ರ - ಚೈತನ್ಯ (ನಿರ್ದೇಶನ - ಶಿವರಾಮ್ ಕ್ರಿಸ್ತ್)
** ಅತ್ಯುತ್ತಮ ನಟ - ಯೋಗೀಶ್ (ಅಂಬಾರಿ)
** ಅತ್ಯುತ್ತಮ ನಟಿ - ರಾಧಿಕಾ ಪಂಡಿತ್ (ಮೊಗ್ಗಿನ ಮನಸು)
** ಅತ್ಯುತ್ತಮ ಪೋಷಕ ನಟ - ಎಂ.ಕೆ. ಮಠ್ (ಗಗ್ಗರ- ತುಳು ಚಿತ್ರ)
** ಅತ್ಯುತ್ತಮ ಪೋಷಕ ನಟಿ - ಲಕ್ಷ್ಮಿ (ವಂಶಿ)
** ಅತ್ಯುತ್ತಮ ಪ್ರಾದೇಶಿಕ ಚಿತ್ರ - ಪೊನ್ನಡ ಮನಡು (ಕೊಡವ), ಸೋನಾ (ಲಂಬಾಣಿ)
** ಅತ್ಯುತ್ತಮ ಡಬ್ಬಿಂಗ್ ಕಲಾವಿದ - ರವೀಂದ್ರನಾಥ್ (ಅಂತರಗಂಗೆ)
** ಅತ್ಯುತ್ತಮ ಡಬ್ಬಿಂಗ್ ಕಲಾವಿದೆ - ಆಶಾ (ಶಂಕರ ಪುಣ್ಯಕೋಟಿ)
** ಅತ್ಯುತ್ತಮ ಕಥೆ - ಬರಗೂರು ರಾಮಚಂದ್ರಪ್ಪ (ಉಗ್ರಗಾಮಿ)
** ಅತ್ಯುತ್ತಮ ಚಿತ್ರಕಥೆ - ಸೂರಿ (ಜಂಗ್ಲಿ)
** ಅತ್ಯುತ್ತಮ ಸಂಭಾಷಣಾಕಾರ - ಹೂಗಾರ್ ಪಟ್ಟಣಶೆಟ್ಟಿ ಮತ್ತು ನರೇಂದ್ರ ಬಾಬು (ಕಬಡ್ಡಿ)
** ಅತ್ಯುತ್ತಮ ಛಾಯಾಗ್ರಾಹಣ - ಕೆ.ಎಂ. ವಿಷ್ಣುವರ್ದನ್ (ನೀನ್ಯಾರೆ)
** ಅತ್ಯುತ್ತಮ ಸಂಗೀತ ನಿರ್ದೇಶಕ - ಅಭಿಮಾನ್ (ತಾಜ್‌ಮಹಲ್)
** ಅತ್ಯುತ್ತಮ ಸೌಂಡ್ ರೆಕಾರ್ಡಿಂಗ್ - ಸೈಕೋ
** ಅತ್ಯುತ್ತಮ ಸಂಕಲನ - ದೀಪು ಎಸ್. ಕುಮಾರ್ (ಜಂಗ್ಲಿ)
** ಅತ್ಯುತ್ತಮ ಕಲಾ ನಿರ್ದೇಶಕ - ಕೆ. ರಾಜು (ನೀನ್ಯಾರೆ)
** ಅತ್ಯುತ್ತಮ ಬಾಲ ಕಲಾವಿದ - ಮಾಸ್ಟರ್ ಮನೋಜ್ (ನಂದಾದೀಪ)
** ಅತ್ಯುತ್ತಮ ಬಾಲ ಕಲಾವಿದೆ - ಸಾನಿಯಾ ಅಯ್ಯರ್ (ವಿಮುಕ್ತಿ)
** ಅತ್ಯುತ್ತಮ ಸಾಹಿತ್ಯ - ಕೆ. ರಾಜು (ನೀನ್ಯಾರೆ)
** ಅತ್ಯುತ್ತಮ ಹಿನ್ನೆಲೆ ಗಾಯಕ - ಚೇತನ್ (ಅಂಬಾರಿ)
** ಅತ್ಯುತ್ತಮ ಹಿನ್ನೆಲೆ ಗಾಯಕಿ - ನಂದಿತಾ (ಮಂದಾಕಿನಿ)
** ಜ್ಯೂರಿಗಳ ವಿಶೇಷ ಪ್ರಶಸ್ತಿ - ರವಿವರ್ಮ (ಸ್ಟಂಟ್ ಮಾಸ್ಟರ್)

ವೆಬ್ದುನಿಯಾವನ್ನು ಓದಿ