ಮಂಗಳೂರಿನಲ್ಲಿ ಕರ್ಫ್ಯೂ: ಕೇರಳಕ್ಕೆ ಸಂಪರ್ಕ ಬಂದ್

ಶುಕ್ರವಾರ, 20 ಡಿಸೆಂಬರ್ 2019 (09:06 IST)
ಮಂಗಳೂರು: ಪೌರತ್ವ ಖಾಯಿದೆ ವಿರೋಧಿಸಿ ಮಂಗಳೂರಿನಲ್ಲಿ ನಿನ್ನೆ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಇಬ್ಬರು ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾರೆ. ಈ ಬೆಳವಣಿಗೆ ಹಿನ್ನಲೆಯಲ್ಲಿ ನಗರದಲ್ಲಿ ಭಾನುವಾರ ಮಧ್ಯರಾತ್ರಿವರೆಗೂ ಕರ್ಫ್ಯೂ ವಿಧಿಸಲಾಗಿದೆ.


ಮಂಗಳೂರಿನ ಕೆಲವು ಕಡೆ ಹಿಂಸಾಚಾರ, ಬಿಗುವಿನ ವಾತಾವರಣವಿದ್ದರೂ ಬಸ್ ಸಂಚಾರ, ಜನ ಸಾಮಾನ್ಯರ ದೈನಂದಿನ ಬದುಕು ಅಸ್ತವ್ಯಸ್ತವಾಗಿದೆ. ಕೆಎಸ್ ಆರ್ ಟಿಸಿ ಬಸ್ ಸಂಚಾರವೂ ಸ್ಥಗಿತಗೊಂಡಿದೆ. ಇದರಿಂದಾಗಿ ಅನ್ಯ ಊರುಗಳಿಂದ ಬೆಳ್ಳಂ ಬೆಳಿಗ್ಗೆ ಬಂದ ಪ್ರಯಾಣಿಕರು ಪರದಾಡುವಂತಾಗಿದೆ.

ಇನ್ನು, ಕೇರಳಕ್ಕೆ ಸಾಗುವ ಬಸ್ ಸಂಚಾರ ವ್ಯವಸ್ಥೆ ಸಂಪೂರ್ಣ ರದ್ದಾಗಿದ್ದು, ಪ್ರಯಾಣಿಕರು ತಮ್ಮ ಗಮ್ಯ ಸ್ಥಳವನ್ನು ತಲುಪಲು ರೈಲು ಮಾರ್ಗವನ್ನು ಅವಲಂಬಿಸುವಂತಾಗಿದೆ. ಇಂದು ಮತ್ತು ನಾಳೆ ದ.ಕನ್ನಡ ಜಿಲ್ಲೆಯ ಶಾಲಾ ಕಾಲೇಜುಗಳಿಗೂ ರಜೆ ಘೋಷಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ