ಸಚಿವ ಡಿಕೆ ಶಿವಕುಮಾರ್ ಬಂಧನವಾಗುತ್ತಾ? ನಾನು ಹೆದರಲ್ಲ ಎಂದ್ರು ಡಿಕೆಶಿ
ಈ ಎಲ್ಲಾ ಸುದ್ದಿಗಳ ಬೆನ್ನಲ್ಲೇ ಆದಿಚುಂಚನಗಿರಿ ಶ್ರೀಗಳನ್ನು ಭೇಟಿಯಾಗಿರುವ ಸಚಿವ ಡಿಕೆಶಿ ಎಲ್ಲಾ ವಿಚಾರಗಳನ್ನು ಅವರೊಂದಿಗೆ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಯಾವುದಕ್ಕೂ ಹೆದರದಿರುವಂತೆ ಸಚಿವರಿಗೆ ಸ್ವಾಮೀಜಿ ಧೈರ್ಯ ತುಂಬಿದ್ದಾರೆ ಎನ್ನಲಾಗಿದೆ.
ನಾನು ಅರೆಸ್ಟ್ ಆಗುತ್ತೇನೆ ಎಂಬ ಸುದ್ದಿ ಆಗಾಗ ಬರುತ್ತಲೇ ಇರುತ್ತದೆ. ಇದಕ್ಕೆಲ್ಲಾ ಹೆದರಲ್ಲ ಎಂದು ಸಚಿವರು ಹೇಳಿದ್ದಾರೆ. ಈ ನಡುವೆ ಇಂದು ಸಚಿವ ಡಿಕೆ ಶಿವಕುಮಾರ್ ನೆರೆ ಪರಿಹಾರದ ಕುರಿತ ರಾಜ್ಯದ ನಿಯೋಗದೊಂದಿಗೆ ದೆಹಲಿಗೆ ತೆರಳಿ ಪ್ರಧಾನಿ ಮೋದಿಯನ್ನು ಭೇಟಿ ಮಾಡಲಿದ್ದಾರೆ.