ಕೈಲಾಸ ಯಾತ್ರೆ ಬಳಿಕ ರಾಹುಲ್ ಗಾಂಧಿ ಮುಂದಿನ ಭೇಟಿ ಎಲ್ಲಿಗೆ ಗೊತ್ತಾ?

ಸೋಮವಾರ, 10 ಸೆಪ್ಟಂಬರ್ 2018 (09:08 IST)
ನವದೆಹಲಿ: ಇದೀಗ ಪವಿತ್ರ ಯಾತ್ರಾ ಸ್ಥಳ ಕೈಲಾಸ ಪ್ರವಾಸ ಕೈಗೊಂಡಿರುವ ಕಾಂಗ್ರೆಸ್ ಅಧ‍್ಯಕ್ಷ ರಾಹುಲ್ ಗಾಂಧಿ ಮುಂದಿನ ಭೇಟಿ ಎಲ್ಲಿಗೆ ಗೊತ್ತಾ?

ಕಾಂಗ್ರೆಸ್ ಮೂಲಗಳ ಪ್ರಕಾರ ರಾಹುಲ್ ಮುಂದಿನ ತಿಂಗಳು ದುಬೈಗೆ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಪಕ್ಷ ರಾಹುಲ್ ಕಾರ್ಯಕ್ರಮಕ್ಕಾಗಿ 50000 ಮಂದಿ ಪ್ರವೇಶಿಸಬಹುದಾದ ಬೃಹತ್ ಮೈದಾನವನ್ನು ನಿಗದಿಗೊಳಿಸಲು ತಯಾರಿ ನಡೆಸಿದೆ ಎನ್ನಲಾಗಿದೆ.

ಆದರೆ ರಾಹುಲ್ ಯಾವಾಗ ದುಬೈಗೆ ಭೇಟಿ ನೀಡುತ್ತಾರೆಂಬ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಇತ್ತೀಚೆಗಷ್ಟೇ ಜರ್ಮನಿ ಮತ್ತು ಇಂಗ್ಲೆಂಡ್ ಗೆ ಭೇಟಿ ನೀಡಿದ್ದ ರಾಹುಲ್ ಪ್ರಧಾನಿ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ್ದರು. ಅವರ ಕೆಲವು ಹೇಳಿಕೆಗಳು ಆಕ್ಷೇಪಕ್ಕೂ ಗುರಿಯಾಗಿತ್ತು. ಇದೀಗ ಮತ್ತೊಂದು ವಿದೇಶ ಪ್ರವಾಸಕ್ಕೆ ಕಾಂಗ್ರೆಸ್ ಯುವರಾಜ ಸಜ್ಜಾಗುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ